ಅಚ್ಚರಿ ಎನಿಸಿದರೂ ಸತ್ಯ; ಈ ಸೆಲೆಬ್ರಿಟಿಗಳು ಸಿಗರೇಟ್ ಸೇದಲ್ಲ, ಮದ್ಯ ಸೇವನೆ ಮಾಡಲ್ಲ
ಸೆಲೆಬ್ರಿಟಿಗಳು ಎಂದಾಗ ಆಗಾಗ ಪಾರ್ಟಿಗೆ ಹಾಜರಿ ಹಾಕಬೇಕಾಗುತ್ತದೆ. ಇಂಥ ಸಂದರ್ಭದಲ್ಲೂ ಮದ್ಯ ಸೇವನೆ ಮಾಡದೇ ಇರುವ ಅನೇಕರಿದ್ದಾರೆ. ಕೆಲವರು ಆಲ್ಕೋಹಾಲ್ ಮುಟ್ಟದೇ ಇರಲು ಅವರ ಫಿಟ್ನೆಸ್ ವಿಚಾರ ಕೂಡ ಕಾರಣ. ಸಿಗರೇಟ್ ಹಾಗೂ ಆಲ್ಕೋಹಾಲ್ನಿಂದ ದೂರ ಇರುವ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ವಿವರ.
ಸಿಗರೇಟ್ ಸೇದೋದು, ಮದ್ಯ (Alcohol) ಸೇವನೆ ಮಾಡೋದು ಸಾಮಾನ್ಯ ಎಂಬಂತಾಗಿದೆ. ಈ ದುರಭ್ಯಾಸ ಇಲ್ಲದೆ ಇರುವವರು ಸಿಗೋದು ತುಂಬಾನೇ ಅಪರೂಪ. ಚಿತ್ರರಂಗದಲ್ಲಿ ಅನೇಕರು ಈ ರೀತಿಯ ದುರಭ್ಯಾಸಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ಸಿಗರೇಟ್ (Cigarette) ಹಿಡಿದು ಕಾಣಿಸಿಕೊಂಡು ಟೀಕೆಗೆ ಒಳಗಾಗಿದ್ದರು. ಆದರೆ ಕೆಲವರು ಇದರಿಂದ ದೂರವೇ ಇದ್ದಾರೆ. ಸೆಲೆಬ್ರಿಟಿಗಳು ಎಂದಾಗ ಆಗಾಗ ಪಾರ್ಟಿಗೆ ಹಾಜರಿ ಹಾಕಬೇಕಾಗುತ್ತದೆ. ಇಂಥ ಸಂದರ್ಭದಲ್ಲೂ ಮದ್ಯ ಸೇವನೆ ಮಾಡದೇ ಇರುವ ಅನೇಕರಿದ್ದಾರೆ. ಕೆಲವರು ಆಲ್ಕೋಹಾಲ್ ಮುಟ್ಟದೇ ಇರಲು ಅವರ ಫಿಟ್ನೆಸ್ ವಿಚಾರ ಕೂಡ ಕಾರಣ. ಸಿಗರೇಟ್ ಹಾಗೂ ಆಲ್ಕೋಹಾಲ್ನಿಂದ ದೂರ ಇರುವ ಬಾಲಿವುಡ್ ಸೆಲೆಬ್ರಿಟಿಗಳ (Bollywood Celebrities) ಬಗ್ಗೆ ಇಲ್ಲಿದೆ ವಿವರ.
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್ ಅವರು ಅನೇಕ ಸಿನಿಮಾಗಳಲ್ಲಿ ಕುಡುಕನಂತೆ ಆ್ಯಕ್ಟ್ ಮಾಡಿದ್ದಾರೆ. ಆದರೆ, ಅವರು ಎಂದಿಗೂ ಆಲ್ಕೋಹಾಲ್ ಸೇವನೆ ಮಾಡಿಲ್ಲ, ಸಿಗರೇಟ್ ಸೇದಿಲ್ಲ. ಈ ವಿಚಾರವನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡು ಟೀಕೆಗೆ ಒಳಗಾಗಿದ್ದರು.
ಅಕ್ಷಯ್ ಕುಮಾರ್
ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಹೀರೋ ಎಂದರೆ ಅದು ಅಕ್ಷಯ್ ಕುಮಾರ್. ಅವರು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುತ್ತಾರೆ. ಆಲ್ಕೋಹಾಲ್, ಸಿಗರೇಟ್ನಿಂದ ದೂರವೇ ಇದ್ದಾರೆ. ಅಕ್ಷಯ್ ಕುಮಾರ್ ಯಾವುದೇ ಪಾರ್ಟಿಗೆ ತೆರಳುವುದಿಲ್ಲ. ನಿತ್ಯ ಬೇಗ ಮಲಗುತ್ತಾರೆ, ಮುಂಜಾನೆ ಬೇಗ ಎದ್ದು ವರ್ಕೌಟ್ ಮಾಡುತ್ತಾರೆ.
ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಅವರು ತಂದೆಯನ್ನು ಫಾಲೋ ಮಾಡುತ್ತಿದ್ದಾರೆ. ಅವರು ಒಳ್ಳೆಯ ಲೈಫ್ಸ್ಟೈಲ್ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಕುಡಿತ ಹಾಗೂ ಧೂಮಪಾನದಿಂದ ಅವರು ದೂರ ಇದ್ದಾರೆ.
ಇದನ್ನೂ ಓದಿ: ಸಿಗರೇಟ್ ಸೇದುವ ಬಗ್ಗೆ ಸ್ಪಂದನಾಗೆ ಇದ್ದ ಅಭಿಪ್ರಾಯ ಏನು? ವಿಜಯ್ ರಾಘವೇಂದ್ರ ಹೇಳಿದ್ದಿಷ್ಟು..
ಜಾನ್ ಅಬ್ರಾಹಂ
ಜಾನ್ ಅಬ್ರಾಹಂ ಅವರು ಫಿಟ್ನೆಸ್ಗೆ ಸಖತ್ ಪ್ರಾಮುಖ್ಯತೆ ನೀಡುತ್ತಾರೆ. ಹ್ಯಾಂಡ್ಸಮ್ ಹಂಕ್ ಎಂದೇ ಫೇಮಸ್ ಆಗಿರುವ ಅವರು ನಿತ್ಯ ಸಾಕಷ್ಟು ಹೊತ್ತು ಜಿಮ್ ಮಾಡುತ್ತಾರೆ. ಆಲ್ಕೋಹಾಲ್, ಸಿಗರೇಟ್ ಹಾಗಿರಲಿ ಫಿಟ್ನೆಸ್ ಹಾಳಾಗಬಾರದು ಎನ್ನುವ ಕಾರಣಕ್ಕೆ ಅವರು ಸಿಹಿ ಪದಾರ್ಥಗಳನ್ನು ಕೂಡ ತಿನ್ನುವುದಿಲ್ಲ. ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು.
ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಬಳಕುವಂತಹ ದೇಹ ಹೊಂದಿದ್ದಾರೆ. ನಟನೆ, ಡ್ಯಾನ್ಸ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಫಿಟ್ನೆಸ್ ಬಗ್ಗೆ ದೀಪಿಕಾ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಅವರು ಆಲ್ಕೋಹಾಲ್ ಸೇವನೆ ಮಾಡುವುದಿಲ್ಲ, ಸಿಗರೇಟ್ ಸೇದುವುದಿಲ್ಲ.
ಇದನ್ನೂ ಓದಿ: ಬಿಹಾರ: ಸಿಗರೇಟ್ ಸೇದಿದ್ದಕ್ಕೆ ಬೆಲ್ಟ್ನಿಂದ ಹೊಡೆದ ಶಾಲಾ ಶಿಕ್ಷಕ, 10ನೇ ತರಗತಿ ವಿದ್ಯಾರ್ಥಿ ಸಾವು
ಸಿದ್ದಾರ್ಥ್ ಮಲ್ಹೋತ್ರಾ
‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದವರು ಸಿದ್ದಾರ್ಥ್ ಮಲ್ಹೋತ್ರಾ. ಅವರು ವಿವಾದಗಳಿಂದ ದೂರವೇ ಇದ್ದಾರೆ. ಸದ್ಯ ಕಿಯಾರಾ ಅಡ್ವಾಣಿ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ದುಶ್ಚಟಗಳಿಂದ ದೂರ ಇದ್ದಾರೆ.
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ ಫಿಟ್ನೆಸ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಅವರು ಯೋಗ ಹಾಗೂ ಜಿಮ್ ಮಾಡುತ್ತಾರೆ. ಅವರು ಆಗಾಗ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಅವರು ಮದ್ಯ ಸೇವನೆ ಮಾಡಿಲ್ಲ. ಈ ಮೂಲಕ ಅವರು ಅನೇಕರಿಗೆ ಮಾದರಿ ಆಗಿದ್ದಾರೆ.
ಇದನ್ನೂ ಓದಿ: Dhoomam Review: ಸಿಗರೇಟ್ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್; ಸರಳವಾಗಿಲ್ಲ ‘ಧೂಮಂ’
ಸೋನಂ ಕಪೂರ್
ನಟಿ ಸೋನಂ ಕಪೂರ್ ಅವರು ಸ್ಟಾರ್ ಕಿಡ್. ಅವರ ತಂದೆ ಅನಿಲ್ ಕಪೂರ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದಾಗ್ಯೂ ಸೋನಂಗೆ ದೊಡ್ಡ ಹೆಸರು ಸಿಕ್ಕಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇಲ್ಲ. ಸೋನಂ ಕೂಡ ಯಾವುದೇ ದುಶ್ಚಟ ಹೊಂದಿಲ್ಲ.
ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ ಈ ಮೊದಲು ಸಾಕಷ್ಟು ದಪ್ಪ ಇದ್ದರು. ಆ ಬಳಿಕ ಅವರು ಜಿಮ್ನಲ್ಲಿ ವರ್ಕೌಟ್ ಮಾಡಿದರು. ನಂತರ ಅವರು ಸ್ಲಿಮ್ ಆದರು. ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಕೂಡ ಆಲ್ಕೋಹಾಲ್, ಸಿಗರೇಟ್ನಿಂದ ದೂರ ಇದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.