ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು
ಮಧ್ಯಪ್ರದೇಶದ ಅಣೆಕಟ್ಟೆಯಲ್ಲಿ 30 ಜನರು ಪ್ರಯಾಣಿಸುತ್ತಿದ್ದ ಕ್ರೂಸ್ ಹಡಗು ಮುಳುಗಿ 4 ಜನರು ಮುಳುಗಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. 18 ಜನರನ್ನು ರಕ್ಷಣೆ ಮಾಡಲಾಗಿದೆ. ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಗೆ ಕ್ರೂಸ್ ಹಡಗು ಮುಳುಗಿ 4 ಜನರು ಸಾವನ್ನಪ್ಪಿದ್ದಾರೆ. ಜಬಲ್ಪುರ್ ಕಲೆಕ್ಟರ್ ಸಮೀರ್ ಮತ್ತು ಇತರ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ತೀವ್ರ ಬಿರುಗಾಳಿಯ ನಡುವೆ ಹಡಗು ಸಮತೋಲನ ಕಳೆದುಕೊಂಡು ಮಗುಚಿ ಬಿದ್ದು ಮುಳುಗಿತು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ ಕಾರಣದಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಜಬಲ್ಪುರ, ಏಪ್ರಿಲ್ 30: ಮಧ್ಯಪ್ರದೇಶದ (Madhya Pradesh) ಜಬಲ್ಪುರದ ಖಮರಿಯಾ ದ್ವೀಪದ ಬಳಿಯ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಇಂದು ಸಂಜೆ ಕ್ರೂಸ್ ಹಡಗು ಮುಳುಗಿದ್ದು, 4 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಇದುವರೆಗೆ 18 ಜನರನ್ನು ರಕ್ಷಿಸಿದೆ. ತೀವ್ರ ಬಿರುಗಾಳಿಯ ನಡುವೆ ಹಡಗು ಸಮತೋಲನ ಕಳೆದುಕೊಂಡು ಮಗುಚಿ ಬಿದ್ದು ಮುಳುಗಿತು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ ಕಾರಣದಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us

