ಮಂಡ್ಯ: 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟ
ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಉಲ್ಲಾಸ್ ಗೌಡ ಅವರ 8 ತಿಂಗಳ ಬಂಡೂರು ತಳಿಯ ಟಗರು 1.48 ಲಕ್ಷಕ್ಕೆ ಮಾರಾಟವಾಗಿದೆ. ಶಿವಮೊಗ್ಗದ ಉದ್ಯಮಿ ಜವಾದ್ ಎಂಬುವರು ಟಗರು ಖರೀದಿಸಿದ್ದಾರೆ. ಉಲ್ಲಾಸ್ ತಂದೆ ಮನೋಹರ್ ಅವರಿಗೆ ಜವಾದ್ ಸನ್ಮಾನಿಸಿ, 1.48 ಲಕ್ಷ ಹಣ ನೀಡಿ ಟಗರು ಕೊಂಡೊಯ್ದರು. ಬಂಡೂರು ತಳಿಯ ಅಭಿವೃದ್ಧಿಗೆ ಈ ಮಾರಾಟ ಮಹತ್ವದ್ದಾಗಿದೆ.
ಮಂಡ್ಯ, ಫೆಬ್ರವರಿ 03: ಬಂಡೂರು ತಳಿಯ ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. ಕೇವಲ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟವಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಉಲ್ಲಾಸ್ ಗೌಡ ಎಂಬುವವರ ಮನೆಯಲ್ಲಿ ಟಗರು ಜನಸಿದೆ. ಕೆಲ ದಿನಗಳ ಬಳಿಕ ಟಿ.ನರಸೀಪುರದ ಮೂಲದವರಿಗೆ ಉಲ್ಲಾಸ್ 20 ಸಾವಿರಕ್ಕೆ ಟಗರು ಮಾರಾಟ ಮಾಡಿದ್ದರು. ಮತ್ತೆ ವಾಪಸ್ಸು 50 ಸಾವಿರಕ್ಕೆ ಅದೇ ಟಗರನ್ನು ಉಲ್ಲಾಸ್ ಹಾಗೂ ಅವರ ತಂದೆ ಮನೋಹರ್ ಖರೀದಿಸಿದ್ದರು. ಇದೀಗ ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಎಂಬುವರಿಗೆ ಉಲ್ಲಾಸ್ ಅದೇ ಟಗರನ್ನು 1.48 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಉಲ್ಲಾಸ್ ತಂದೆ ಮನೋಹರ್ ಅವರಿಗೆ ಜವಾದ್ ಸನ್ಮಾನಿಸಿ, 1.48 ಲಕ್ಷ ಹಣ ನೀಡಿ ಟಗರು ಕೊಂಡೊಯ್ದರು. ಇನ್ನು, ಮಾಂಸದ ದೃಷ್ಟಿಕ್ಕಿಂತ ಹೆಚ್ಚಾಗಿ ಬಂಡೂರು ತಳಿ ಅಭಿವೃದ್ದಿಗಾಗಿ ಈ ಟಗರು ಕೊಂಡುಕೊಳ್ಳಲಾಗಿದೆ ಎಂದು ಜವಾದ್ ಹೇಳಿದರು.
Published on: Feb 03, 2025 09:34 AM