‘ನನ್ನ ತಮ್ಮನ ಮದುವೆಗೆ ದರ್ಶನ್ ಬರ್ತಾನೆ’; ರಕ್ಷಿತಾ ಪ್ರೇಮ್
ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ವಿವಾಹ ಆಗುತ್ತಿದ್ದಾರೆ. ಇದರಿಂದ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಏಕ್ ಲವ್ ಯಾ’ ಖ್ಯಾತಿಯ ನಟ ರಾಣಾ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಾಣಾ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಕೂಡ ರಕ್ಷಿತಾ.
ರಕ್ಷಿತಾ ಹಾಗೂ ದರ್ಶನ್ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈಗ ರಕ್ಷಿತಾ ಸಹೋದರ ರಾಣಾ ವಿವಾಹ ಆಗುತ್ತಿದ್ದಾರೆ. ಇದಕ್ಕೆ ದರ್ಶನ್ಗೂ ಆಹ್ವಾನ ಕೊಟ್ಟಿರೋದಾಗಿ ರಕ್ಷಿತಾ ಹೇಳಿದ್ದಾರೆ. ‘ನಾನು ದರ್ಶನ್ ಹಾಗೂ ವಿಜಿ (ವಿಜಯಲಕ್ಷ್ಮೀ) ಇಬ್ಬರಿಗೂ ಆಮಂತ್ರಣ ಕೊಟ್ಟಿದ್ದೇನೆ. ಅವನು ಬರ್ತೀನಿ ಅಂದಿದ್ದಾನೆ. ಅವನು ಮದುವೆಗೆ ಬಂದೇ ಬರ್ತಾನೆ’ ಎಂದು ರಕ್ಷಿತಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.