ಮಹಾಕುಂಭದಲ್ಲಿ ಬಸಂತ ಪಂಚಮಿ ಪ್ರಯುಕ್ತ ಬೆಳ್ಳಂಬೆಳಗ್ಗೆ 62 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಅಮೃತ ಸ್ನಾನ
ಇಂದು ಬಸಂತ್ ಪಂಚಮಿಯ ಹಿನ್ನೆಲೆಯಲ್ಲಿ ಮೂರನೇ 'ಅಮೃತ ಸ್ನಾನ'ದಂದು ಬೆಳಿಗ್ಗೆ 8 ಗಂಟೆಯ ಹೊತ್ತಿಗೆ 62 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇತರ ದೇಶಗಳ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. 2025ರ ಮಹಾ ಕುಂಭ ಮೇಳದ ಕೊನೆಯ 'ಅಮೃತ ಸ್ನಾನ' ಬಸಂತ್ ಪಂಚಮಿಯಾದ ಇಂದು ನಡೆಯುತ್ತಿದೆ.
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಬಸಂತ ಪಂಚಮಿಯ ಅಮೃತ ಸ್ನಾನದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಇಂದು ಮುಂಜಾನೆ 8 ಗಂಟೆಯೊಳಗೆ 62 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಉತ್ತರ ಪ್ರದೇಶದ ಮಾಹಿತಿ ಇಲಾಖೆಯ ಪ್ರಕಾರ, ಜನವರಿ 13ರಂದು ಮಹಾ ಕುಂಭಮೇಳ ಪ್ರಾರಂಭವಾದಾಗಿನಿಂದ ಇಂದಿನವರೆಗೆ 349.7 ಮಿಲಿಯನ್‌ಗಿಂತಲೂ ಹೆಚ್ಚು (34.97 ಕೋಟಿ) ಭಕ್ತರು ಪವಿತ್ರ ಸ್ನಾನದಲ್ಲಿ ಭಾಗವಹಿಸಿದ್ದಾರೆ. 2025ರ ಮಹಾ ಕುಂಭ ಮೇಳದ ಕೊನೆಯ ‘ಅಮೃತ ಸ್ನಾನ’ ಬಸಂತ್ ಪಂಚಮಿಯಾದ ಇಂದು ನಡೆಯುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ