Independence Day 2026: ಸಿಗಂದೂರು ಸೇತುವೆ ಮೇಲೆ ನಡುರಾತ್ರಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದ ಜನ!

Edited By:

Updated on: Aug 15, 2026 | 10:26 AM

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಐತಿಹಾಸಿಕ ಸಿಗಂದೂರು ಸೇತುವೆಯ ಮೇಲೆ ಕರೂರು ಹೋಬಳಿಯ ಸ್ಥಳೀಯ ಜನರು ನಡುರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೇಶಪ್ರೇಮ ಮೆರೆದಿದ್ದಾರೆ. ಕರೂರಿನ ಕಳಸವಳ್ಳಿ-ಅಂಬಾರಗೋಡ್ಲು ಸಂಪರ್ಕಿಸುವ ಶರಾವತಿ ಹಿನ್ನೀರಿನ ಬೃಹತ್ ಸೇತುವೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, 'ವಂದೇ ಮಾತರಂ' ಹಾಗೂ 'ಭಾರತ್ ಮಾತಾ ಕೀ ಜೈ' ಎಂಬ ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಲಾಯಿತು. ಈ ಅಪರೂಪದ ಕ್ಷಣದಲ್ಲಿ ಸ್ಥಳೀಯ ಪ್ರಮುಖರಾದ ಪ್ರಸನ್ನ ಕೆರೆಕೈ, ರಾಜೇಂದ್ರ ಅವಿನಹಳ್ಳಿ, ಗಿರೀಶ್, ಶ್ರೀಧರ್ ಚುಟ್ಟಿಕೆರೆ ಸೇರಿದಂತೆ ನೂರಾರು ದೇಶಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ತಡರಾತ್ರಿಯಲ್ಲೂ ಕಂಠಪೂರ್ತಿ ದೇಶಪ್ರೇಮದ ಗೀತೆಗಳನ್ನು ಹಾಡಿ ಸಂಭ್ರಮ ಹಂಚಿಕೊಂಡರು.

ಶಿವಮೊಗ್ಗ, ಆಗಸ್ಟ್ 15: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಐತಿಹಾಸಿಕ ಸಿಗಂದೂರು ಸೇತುವೆಯ ಮೇಲೆ ಕರೂರು ಹೋಬಳಿಯ ಸ್ಥಳೀಯ ಜನರು ನಡುರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೇಶಪ್ರೇಮ ಮೆರೆದಿದ್ದಾರೆ. ಕರೂರಿನ ಕಳಸವಳ್ಳಿ-ಅಂಬಾರಗೋಡ್ಲು ಸಂಪರ್ಕಿಸುವ ಶರಾವತಿ ಹಿನ್ನೀರಿನ ಬೃಹತ್ ಸೇತುವೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ‘ವಂದೇ ಮಾತರಂ’ ಹಾಗೂ ‘ಭಾರತ್ ಮಾತಾ ಕೀ ಜೈ’ ಎಂಬ ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಲಾಯಿತು. ಈ ಅಪರೂಪದ ಕ್ಷಣದಲ್ಲಿ ಸ್ಥಳೀಯ ಪ್ರಮುಖರಾದ ಪ್ರಸನ್ನ ಕೆರೆಕೈ, ರಾಜೇಂದ್ರ ಅವಿನಹಳ್ಳಿ, ಗಿರೀಶ್, ಶ್ರೀಧರ್ ಚುಟ್ಟಿಕೆರೆ ಸೇರಿದಂತೆ ನೂರಾರು ದೇಶಪ್ರೇಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ತಡರಾತ್ರಿಯಲ್ಲೂ ಕಂಠಪೂರ್ತಿ ದೇಶಪ್ರೇಮದ ಗೀತೆಗಳನ್ನು ಹಾಡಿ ಸಂಭ್ರಮ ಹಂಚಿಕೊಂಡರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 15, 2026 10:25 AM
Loading...
Unable to load recommendations.
Follow Us