ಸೋಶಿಯಲ್ ಮೀಡಿಯಾ ಸ್ಟಾರ್ ಕಿಪಿ ಕೀರ್ತಿ ಜೊತೆ ಟಿವಿ9 ಪ್ರತಿನಿಧಿಯ ಮಾತು, ಕೀರ್ತಿಯ ಕನ್ನಡಾಭಿಮಾನ ಅನನ್ಯ!
ಕಿಪಿ ಕೀರ್ತಿ ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತಾಡುತ್ತಾರಾದರೂ ಅಲ್ಲಲ್ಲಿ ಅಲ್ಪವಿರಾಮಗಳನ್ನು ಹಾಕಿ ಪದಗಳಿಗಾಗಿ ತಡಕಾಡುತ್ತಾರೆ. ಟಿವಿ ಪರದೆಯ ಖ್ಯಾತ ಌಂಕರ್ ಅನುಶ್ರೀಯನ್ನು ಕೀರ್ತಿ ತುಂಬಾ ಇಷ್ಟಪಡುತ್ತಾರೆ. ತನ್ನಲ್ಲಿರುವ ಪ್ರತಿಭೆಯನ್ನು ಅವರೇ ಗುರತಿಸಿದ್ದು ಎಂದು ಕೀರ್ತಿ ಹೇಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ಗಳೆನಿಸಿಕೊಂಡವರನ್ನು ತಮ್ಮ ಕುಟುಂಬ ಎನ್ನುವ ಕೀರ್ತಿ ತಮ್ಮ ನಿಷ್ಕಪಟ ಮಾತುಗಳಿಂದ ಇಷ್ಟವಾಗುತ್ತಾರೆ.
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರಿಗೆಲ್ಲ ಕಿಪಿ ಕೀರ್ತಿ ಪರಿಚಯ ಇದ್ದೇ ಇರುತ್ತೆ. ಕೊಡಗಿನ ಕೀರ್ತಿ ಇವತ್ತು ಬೆಂಗಳೂರಲ್ಲಿದ್ದರು ಮತ್ತು ನಮ್ಮ ಪ್ರತಿನಿಧಿ ಅವರೊಂದಿಗೆ ಮಾತಾಡಿದ್ದಾರೆ. ಕೀರ್ತಿಗೆ ಕನ್ನಡದ ಸಿನಿಮಾ, ಹಾಡು, ನಟರು ಹಾಗೂ ಜನರ ಬಗ್ಗೆ ಎಷ್ಟು ಪ್ರೀತಿ ಮತ್ತು ಅಭಿಮಾನವಿದೆ ಅನ್ನೋದು ಮಾತುಗಳಲ್ಲಿ ಗೊತ್ತಾಗುತ್ತದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿರುವ ಕೀರ್ತಿಗೆ ಪುನೀತ್ ರಾಜ್ಕುಮಾರ್ ಅವರೆಂದರೆ ಬಹಳ ಇಷ್ಟ. ಇದೇ ರಿಯಾಲಿಟಿ ಶೋನ ಭಾಗವಾಗಿರುವ ಮನು ಅವರ ಹಾಡಿರುವ ಹಾಡಿನ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೀರ್ತಿ ಬೆಂಗಳೂರುಗೆ ಬಂದಿದ್ದಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Kashmir : ಕಾಶ್ಮೀರದ ಅತೀ ಚಿಕ್ಕವಯಸ್ಸಿನ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಅಕ್ಸಾ ಮಸರತ್