Delhi Assembly Poll Results: ನಾನು ಪ್ರಚಾರ ಮಾಡಿದ ಕ್ಷೇತ್ರದಲ್ಲಿ ಹಿಂದ್ಯಾವತ್ತೂ ಬಿಜೆಪಿ ಗೆದ್ದಿರಲಿಲ್ಲ, ಈ ಬಾರಿ ಭಾರೀ ಗೆಲುವು: ಸೋಮಣ್ಣ
Delhi Assembly Poll Results: ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗಿದ್ದು ಹೇಗೆ ಅಂತ ಕೇಳಿದರೆ ಸೋಮಣ್ಣ, ಕಾಂಗ್ರೆಸ್ ಪಕ್ಷದವರಿಗೆ ಕೆಲಸವಿಲ್ಲದ ಕಾರಣ ಬಿಜೆಪಿಯನ್ನು ಮುಸ್ಲಿಂ ವಿರೋಧಿ ಅಂತ ಬಿಂಬಿಸಲು ಪ್ರಯತ್ನಿಸುತ್ತಾರೆ. ತಮ್ಮ ಸರ್ಕಾರ ಒಂದು ಅದ್ಭುತವಾದ ಬಜೆಟ್ ಜನಕ್ಕೆ ನೀಡಿದೆ, ಕಾಂಗ್ರೆಸ್ ನಾಯಕರು ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ಬಿಚ್ಚಿದರೆ ಎಲ್ಲ ನಿಚ್ಚಳವಾಗಿ ಕಾಣುತ್ತದೆ ಎಂದು ಸೋಮಣ್ಣ ಹೇಳಿದರು
ದಾವಣಗೆರೆ: ಕೇಂದ್ರ ರೇಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ತುಮಕೂರುನಿಂದ ದಾವಣಗೆರೆಗೆ ತೆರಳಿ ಮಾಧ್ಯಮಗಳೊಡನೆ ಮಾತಾಡುವಾಗ ತುಮಕೂರುನಲ್ಲಿ ಹೇಳಿದ್ದನ್ನೇ ಪುನರಾವರ್ತಿಸಿದರು. ದೆಹಲಿಯಲ್ಲಿ ಇವರು ಪ್ರಚಾರಕ್ಕೆಂದು ತೆರಳಿದ ನಾಗ್ಲೋಯಿ ಜಾಟ್ ಕ್ಷೇತ್ರವು ಬೆಂಗಳೂರಿನ ಪಾದರಾಯಣಪುರ ಮತ್ತು ಶಿವಾಜಿನಗರಕ್ಕಿಂತ ಕಡೆಯಾಗಿದೆ. ಹಳೆಯ ದೆಹಲಿಯ ಭಾಗವಾಗಿರುವ ಅಲ್ಲಿ ಬೆಂಗಳೂರಿನ ಹಾಗೆಯೇ ಇವರು ಪ್ರಚಾರ ಮಾಡಿದರಂತೆ. ಹಿಂದೆ ಯಾವತ್ತೂ ಗೆದ್ದಿರದ ನಾಗ್ಲೋಯಿ ಜಾಟ್ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ಕುಮಾರ್ ಶೋಕೀನ್ 26,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆಯೇ ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣವೆಂದು ಸೋಮಣ್ಣ ಹೇಳುತ್ತಾರೆ..
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 08, 2025 06:11 PM