AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Waste to Wonder: ಭೋಪಾಲ್ ನಗರದ ಕಲಾವಿದರ ತಂಡವೊಂದು ಹಾಳಾದ ವಾಹನಗಳ ಬಿಡಿಭಾಗಗಳಿಂದ ಭಾರೀ ಗಾತ್ರದ ರುದ್ರ ವೀಣೆ ತಯಾರಿಸಿದೆ!

Waste to Wonder: ಭೋಪಾಲ್ ನಗರದ ಕಲಾವಿದರ ತಂಡವೊಂದು ಹಾಳಾದ ವಾಹನಗಳ ಬಿಡಿಭಾಗಗಳಿಂದ ಭಾರೀ ಗಾತ್ರದ ರುದ್ರ ವೀಣೆ ತಯಾರಿಸಿದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 26, 2023 | 8:01 AM

Share

ಪವನ್ ದೇಶಪಾಂಡೆ ಅವರೊಂದಗಿದ್ದ ಇತರ 15 ಕಲಾವಿದರು ರುದ್ರ ವೀಣೆಯನ್ನು ತಯಾರಿಸಲು ಐದು ಟನ್ ತ್ಯಾಜ್ಯವನ್ನು ಸಂಗ್ರಹಿಸಿದ್ದಾರಂತೆ. ಅವುಗಳಲ್ಲಿ ಹೆಚ್ಚಿನವು ಹಳೆಯ ವಾಹನಗಳ ಅನುಪಯುಕ್ತ ವಸ್ತುಗಳು. ಅವುಗಳನ್ನು ಬಳಸಿ 10 ಅಡಿ ಅಗಲ, 12 ಅಡಿ ಎತ್ತರ ಹಾಗೂ 28 ಅಡಿ ಉದ್ದದ ರುದ್ರ ವೀಣೆ ತಯಾರಿಸಲಾಗಿದೆ.

ಭೋಪಾಲ್‌: ನಗರದ ಕಲಾವಿದರ ತಂಡವೊಂದು ತ್ಯಾಜ್ಯ ವಸ್ತುಗಳನ್ನು (scrap) ಸಂಗ್ರಹಿಸಿ, ಜೋಡಿಸಿ ಒಂದು ರುದ್ರ ವೀಣೆಯನ್ನು (Rudra Veena) ತಯಾರಿಸಿ ಅದಕ್ಕೆ ‘ವೇಸ್ಟ್ ಟು ವಂಡರ್’ (Waste to Wonder ) ಅಂತ ಹೆಸರಿಟ್ಟಿದ್ದಾರೆ. ಭೋಪಾಲ್ ನಗರದ ಜನನಿಬಿಡ ‘ಅಟಲ್ ಪಥ’ ಜಂಕ್ಷನ್ ನಲ್ಲಿ ರುದ್ರ ವೀಣೆಯನ್ನು ಸ್ಥಾಪಿಸಲಾಗಿದೆ.

‘ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ, ‘ಕಬಾಡ್ ಸೆ ಜುಗಾಡ್’, ‘ಕಚ್ರೆ ಸೆ ಕಾಂಚನ್’ ಉಕ್ತಿಗಳಿಗೆ ಅನುಗುಣವಾದ ಪರಿಕಲ್ಪನೆ ಇದಾಗಿದೆ. ಆ ಪರಿಕಲ್ಪನೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಮೂರು ಆರ್ ಗಳು-ರೆಡ್ಯೂಸ್, ರೀಯೂಸ್ ಮತ್ತು ರಿಸೈಕಲ್ ಗಳಿಗೆ ನಾವು ಇನ್ನೆರಡು ಆರ್ ಗಳನ್ನು ಸೇರಿಸಿದ್ದೇವೆ; ರಿಡಿಸ್ಟ್ರಿಬ್ಯೂಷನ್ ಮತ್ತು ರೆಸ್ಪಾನ್ಸಿಬಿಲಿಟಿ!’ ಎಂದು ರುದ್ರವೀಣೆಯನ್ನು ವಿನ್ಯಾಸಗೊಳಿಸಿದ ಕಲಾವಿದರಲ್ಲಿ ಒಬ್ಬರಾಗಿರುವ ಪವನ್ ದೇಶಪಾಂಡೆ ಹೆಳುತ್ತಾರೆ.

ಇದನ್ನೂ ಓದಿ:  ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯ ಬರ್ಬರ ಕೊಲೆ; ನಾಲ್ವರಿಂದ ಅತ್ಯಾಚಾರ ಶಂಕೆ

ಪವನ್ ದೇಶಪಾಂಡೆ ಅವರೊಂದಗಿದ್ದ ಇತರ 15 ಕಲಾವಿದರು ರುದ್ರ ವೀಣೆಯನ್ನು ತಯಾರಿಸಲು ಐದು ಟನ್ ತ್ಯಾಜ್ಯವನ್ನು ಸಂಗ್ರಹಿಸಿದ್ದಾರಂತೆ. ಅವುಗಳಲ್ಲಿ ಹೆಚ್ಚಿನವು ಹಳೆಯ ವಾಹನಗಳ ಅನುಪಯುಕ್ತ ವಸ್ತುಗಳು. ಅವುಗಳನ್ನು ಬಳಸಿ 10 ಅಡಿ ಅಗಲ, 12 ಅಡಿ ಎತ್ತರ ಹಾಗೂ 28 ಅಡಿ ಉದ್ದದ ರುದ್ರ ವೀಣೆ ತಯಾರಿಸಲಾಗಿದೆ. ತಮ್ಮ ತಂಡವು ಈಗಾಗಲೇ ತ್ಯಾಜ್ಯದಿಂದ ಅನೇಕ ಉಪಯುಕ್ತ ವಸ್ತುಗಳನ್ನು ತಯಾರಿಸಿದೆ ಎಂದು ಪವನ್ ದೇಶಪಾಂಡೆ ಹೇಳುತ್ತಾರೆ. ಈ ಬಾರಿ ಭಾರತೀಯ ವಾದ್ಯಗಳನ್ನು ತಯಾರಿಸುವುದು ಅವರ ಉದ್ದೇಶವಾಗಿತ್ತು.

‘ಏನು ತಯಾರಿಸುವುದು ಅಂತ ಇಡೀ ತಂಡದ ಸದಸ್ಯರು ಒಂದೆಡೆ ಕೂತು ಯೋಚನೆ ಮಾಡಿದಾಗ ನಮಗೆ ಹೊಳೆದದ್ದು ಮುಂದಿನ ಪೀಳಿಗೆಗೆ ನೆನಪಿನಲ್ಲಿ ಉಳಿಯುವಂಥ ರುದ್ರ ವೀಣೆಯನ್ನು ತಯಾರು ಮಾಡುವ ಯೋಜನೆ. ವೀಣೆ ಕ್ರಮೇಣವಾಗಿ ನಮ್ಮ ಸ್ಮೃತಿಪಟಲದಿಂದ ದೂರವಾಗುತ್ತಿದೆ. ನಮ್ಮ ಭಾರತೀಯ ಸಂಪ್ರದಾಯ, ಪುರಾಣಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಸರಸ್ವತಿ ಜೀ ಅವರ ಸಂಗೀತ ವಾದ್ಯ ಇದು. ಲತಾ ಮಂಗೇಶ್ಕರ್ ಜೀ ಅವರಿಗೆ ಸಮರ್ಪಿಸುವ ಉದ್ದೇಶದಿಂದ ನಾವು ಈ ರುದ್ರ ವೀಣೆಯನ್ನು ತಯಾರಿಸಿದ್ದೇವೆ ಮತ್ತು ಆಗಲೇ ಹೇಳಿದಂತೆ ನಿರಪಯುಕ್ತ ವಸ್ತುಗಳಿಂದ ಇದನ್ನು ತಯಾರಿಸಲಾಗಿದೆ,’ ಎಂದು ಪವನ್ ದೇಶಪಾಂಡೆ ಹೆಳುತ್ತಾರೆ.

ಇದನ್ನೂಓದಿ:  ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ರ‍್ಯಾಂಪ್ ವಾಕ್ ; 25 ವರ್ಷಗಳ ಹಿಂದಿನ ವಿಡಿಯೊ ವೈರಲ್

ರುದ್ರ ವೀಣೆಯನ್ನು ತಯಾರಿಸಲು ಕಲಾವಿದರು ಕೆಟ್ಟು ಕೆಲಸಕ್ಕೆ ಬಾರದ ವಾಹನಗಳ ಚೈನ್‌, ಬಾಲ್-ಬೇರಿಂಗ್‌, ತಂತಿ, ಗೇರ್‌ ಮೊದಲಾದ ವಸ್ತುಗಳನ್ನು ಬಳಸಿದ್ದಾರೆ.

ರುದ್ರ ವೀಣೆಯನ್ನು ತಯಾರಿಸಲು ಐದು ತಿಂಗಳ ಸಮಯ ಹಿಡಿದಿದೆ ಮತ್ತು ಈ ವಿಶಿಷ್ಟ ಕಲಾಕೃತಿಗೆ ತಗುಲಿರುವ ವೆಚ್ಚ 15 ರಿಂದ 20 ಲಕ್ಷ ರೂ. ವೆಚ್ಚವನ್ನು ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ ಭರಿಸಿದೆ ಎಂದು ಕಲಾವಿದರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ