ಸಿಎಂ ಸಿದ್ದರಾಮಯ್ಯಗೆ ಕೊಡಲು ಬೆಣ್ಣೆ, ಮಜ್ಜಿಗೆ ತಂದ ಅಭಿಮಾನಿ: ಭೇಟಿಗೆ ಅವಕಾಶ ಸಿಗದೆ ನಿರಾಸೆ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಿಎಂ ಸಿದ್ದರಾಮಯ್ಯ ಅಭಿಮಾನಿ ಲಕ್ಷ್ಮಣ್ ಗೌಡ, ಸಿಎಂ ನಿವಾಸ ಕಾವೇರಿಗೆ ಬೆಣ್ಣೆ, ಮಜ್ಜಿಗೆ ಮತ್ತು ಮಾವಿನಹಣ್ಣು ತಂದಿದ್ದರು. ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಅಪೇಕ್ಷೆಯಲ್ಲಿದ್ದ ಅವರಿಗೆ ಅವಕಾಶ ಸಿಗಲಿಲ್ಲ. ಈ ಹಿಂದೆ ಹಲವು ಬಾರಿ ಸಿಎಂಗೆ ತಿಂಡಿ ತಂದಿದ್ದರೂ, ಭೇಟಿಗೆ ಅನುಮತಿ ದೊರೆಯದ ಕಾರಣ ನಿರಾಸೆಯಿಂದಲೇ ತೆರಳಿದರು.
ಬೆಂಗಳೂರು, ಅಕ್ಟೋಬರ್ 11: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಲಕ್ಷ್ಮಣ್ ಗೌಡ ಎಂಬುವವರು ಸಿಎಂ ಸಿದ್ದರಾಮಯ್ಯಗಾಗಿ ಬೆಣ್ಣೆ, ಮಜ್ಜಿಗೆ ಮತ್ತು ಮಾವಿನಹಣ್ಣು ತೆಗೆದುಕೊಂಡು ಸಿಎಂ ನಿವಾಸ ಕಾವೇರಿಗೆ ಬಂದಿದ್ದರು. ಆದರೆ ಸಿಎಂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅಭಿಮಾನಿ ಲಕ್ಷ್ಮಣ್ ಗೌಡ ಬೇಸರದಲ್ಲಿ ತೆರಳಿದರು. ಈ ಹಿಂದೆಯೂ ಸಿಎಂಗೆ ವಿಶೇಷ ತಿಂಡಿ ತಂದಿದ್ದರು.
ವರದಿ: ಈರಣ್ಣ ಬಸವ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

