ವಿಧಾನ ಪರಿಷತ್ ಚುನಾವಣೆ: ದೆಹಲಿಯಲ್ಲಿ ಚರ್ಚೆಗೆ ಬಂದ ಕಾಂಗ್ರೆಸ್ ಮುಖಂಡರ ಹೆಸರುಗಳು ಹೀಗಿವೆ
ದಲಿತ ಸಮುದಾಯದ ಅಭ್ಯರ್ಥಿಯ ಹೆಸರನ್ನು ತಾವೇ ಸೂಚಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಂತೆ. ಮುಸ್ಲಿಂ ಸಮುದಾಯದಿಂದ ಇಸ್ಮಾಯಿಲ್ ತಮಟಗಾರ್ ಮತ್ತು ಸೌದಾಗರ್ ಎನ್ನುವ ಕಾಂಗ್ರೆಸ್ ಮುಖಂಡರ ಹೆಸರುಗಳನ್ನು ಮತುಕತೆ ನಡೆಯುವಾಗ ಪ್ರಸ್ತಾಪಿಸಲಾಗಿದೆ.
ದೆಹಲಿ: ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲು ರಾಜ್ಯ ಕಾಂಗ್ರೆಸ್ ಭಾರಿ ಕಸರತ್ತು ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿನ್ನೆ ಮತ್ತು ಇವತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರಂದೀಪ್ ಸುರ್ಜೆವಾಲಾ ಮತ್ತು ಕೆಸಿ ವೇಣುಗೋಪಾಲ್ ಜೊತೆ ದೀರ್ಘ ಸಮಾಲೋಚನೆ ನಡೆಸಿದ್ದಾರೆ. ನಮ್ಮ ದೆಹಲಿ ವರದಿಗಾರ ನೀಡುತ್ತಿರುವ ಮಾಹಿತಿಯ ಪ್ರಕಾರ ಸಮುದಾಯಗಳ ಆಧಾರದಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಪ್ರಯತ್ನ ಕಾಂಗ್ರೆಸ್ ನಾಯಕರಿಂದ ನಡೆದಿದೆ. ಒಕ್ಕಲಿಗ ಸಮುದಾಯದಿಂದ ಈಗಿರುವ ಗೋವಿಂದರಾಜ್ ಅವರನ್ನೇ ಮತ್ತೊಂದು ಅವಧಿಗೆ ಮುಂದುವರಿಸೋದಾ ಅಥವಾ ವಿನಯ್ ಕಾರ್ತೀಕ್ ಇಲ್ಲವೇ ಬಿಎಂ ಸಂದೀಪ್ ಅವರಿಗೆ ಅವಕಾಶ ನೀಡೋದಾ ಅಂತ ಚರ್ಚೆಯಾಗಿದೆಯಂತೆ. ಒಬಿಸಿ ಸಮುದಾಯದಿಂದ ಯತೀಂದ್ರ ಸಿದ್ದರಾಮಯ್ಯ ಮತ್ತು ಅತಿ ಹಿಂದುಳಿದ ವರ್ಗಗಳ ಸಮುದಾಯದಿಂದ ಎಂ ಸಿ ವೇಣಗೋಪಾಲ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.
ದಲಿತ ಸಮುದಾಯದ ಅಭ್ಯರ್ಥಿಯ ಹೆಸರನ್ನು ತಾವೇ ಸೂಚಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಂತೆ. ಮುಸ್ಲಿಂ ಸಮುದಾಯದಿಂದ ಇಸ್ಮಾಯಿಲ್ ತಮಟಗಾರ್ ಮತ್ತು ಸೌದಾಗರ್ ಎನ್ನುವ ಕಾಂಗ್ರೆಸ್ ಮುಖಂಡರ ಹೆಸರುಗಳನ್ನು ಮತುಕತೆ ನಡೆಯುವಾಗ ಪ್ರಸ್ತಾಪಿಸಲಾಗಿದೆ. ಸರ್ಕಾರದಲ್ಲಿ ನಮ್ಮ ಪ್ರತಿನಿಧಿತ್ವ ಇಲ್ಲ ಅಂತ ಕ್ರಿಶ್ಚಿಯನ್ ಸಮುದಾಯದವರು ರಾಜ್ಯದ ಮುಖಂಡರಿಗೆ ಮನವಿ ಮಾಡಿರುವುದರಿಂದ, ಹಿಂದೆ ಪರಿಷತ್ ಸದಸ್ಯರಾಗಿದ್ದ ಐವಾನ್ ಡಿಸೋಜಾ ಇಲ್ಲವೇ ಪ್ರವೀಣ್ ಪೀಟರ್ ಅವರನ್ನು ಪರಿಗಣಿಸುವ ಬಗ್ಗೆ ಚರ್ಚೆಯಾಗಿದೆ ಎಂದು ವರದಿಗಾರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದಲ್ಲಿ ಚುನಾವಣೆ ಮುಗಿದರೂ ನಿಲ್ಲದು ಚುನಾವಣಾ ತಯಾರಿ! ವಿಧಾನಪರಿಷತ್ನಲ್ಲಿ ಬಹುಮತದತ್ತ ಕಾಂಗ್ರೆಸ್ ಚಿತ್ತ