ಸರ್ಕಾರ, ನನ್ನ ಹಾಗೂ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಶತ್ರುಸಂಹಾರ ಯಾಗ ಮಾಡಿಸಲಾಗುತ್ತಿದೆ: ಶಿವಕುಮಾರ್

ಸರ್ಕಾರ, ನನ್ನ ಹಾಗೂ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಶತ್ರುಸಂಹಾರ ಯಾಗ ಮಾಡಿಸಲಾಗುತ್ತಿದೆ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2024 | 5:45 PM

ಒಟ್ಟಿನಲ್ಲಿ ರಾಜ್ಯ ಸರ್ಕಾರವನ್ನು ಉರುಳಿಸಲು ಯಾಗ ಮಾಡಿಸುತ್ತಿದ್ದಾರೆ, ಇದನ್ನು ಯಾರು ಮಾಡಿಸುತ್ತಿದ್ದಾರೆ, ಯಾರೆಲ್ಲ ಇದರಲ್ಲಿ ಇನ್ವಾಲ್ವ್ ಆಗಿದ್ದಾರೆ ಮೊದಲಾದ ಎಲ್ಲ ಮಾಹಿತಿ ತಮಗೆ ಲಭ್ಯವಾಗಿದೆ ಎಂದು ಶಿವಕುಮಾರ್ ಹೇಳಿದರು. ಯಾಗದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಅವರು ಚೀಟಿಯೊಂದರಲ್ಲಿ ಬರೆದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಬೆಂಗಳೂರು: ದೆಹಲಿಯಿಂದ ವಾಪಸ್ಸು ಬಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ರಿಲ್ಯಾಕ್ಸ್ಟ್ ಮೂಡ್ ನಲ್ಲಿದ್ದರು. ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಒಂದು ಸ್ಪೋಟಕ ಮಾಹಿತಿಯನ್ನು (explosive information) ಹೊರಗೆಡಹಿದರು. ಸಿದ್ದರಾಮಯ್ಯ ಮತ್ತು ತನ್ನ ವಿರುದ್ಧ ಕೇರಳದ ಪಟ್ಟಣವೊಂದರಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶತ್ರುಭೈರವಿ ಯಾಗ (Shatru Bhairavi Yaga) ಮಾಡಿಸಲಾಗುತ್ತಿದೆಯಂತೆ. ಶತ್ರುವಿನ ಸಂಹಾರ ಮಾಡಲು ಈ ಯಾಗ ಮಾಡಿಸಲಾಗುತ್ತದೆ ಮತ್ತು ಇದಕ್ಕಾಗಿ ಕುರಿ, ಎಮ್ಮೆ, ಮೇಕೆ ಮತ್ತು ಹಂದಿಗಳನ್ನು ಬಲಿ ಅರ್ಪಿಸಲಾಗುತ್ತಿದೆಯಂತೆ ಎಂದು ಶಿವಕುಮಾರ್ ಹೇಳಿದರು. ಒಟ್ಟಿನಲ್ಲಿ ರಾಜ್ಯ ಸರ್ಕಾರವನ್ನು ಉರುಳಿಸಲು ಯಾಗ ಮಾಡಿಸುತ್ತಿದ್ದಾರೆ, ಇದನ್ನು ಯಾರು ಮಾಡಿಸುತ್ತಿದ್ದಾರೆ, ಯಾರೆಲ್ಲ ಇದರಲ್ಲಿ ಇನ್ವಾಲ್ವ್ ಆಗಿದ್ದಾರೆ ಮೊದಲಾದ ಎಲ್ಲ ಮಾಹಿತಿ ತಮಗೆ ಲಭ್ಯವಾಗಿದೆ ಎಂದು ಶಿವಕುಮಾರ್ ಹೇಳಿದರು. ಯಾಗದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಅವರು ಚೀಟಿಯೊಂದರಲ್ಲಿ ಬರೆದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಯಾರೇನೇ ಮಾಡಲಿ, ಯಾವುದೇ ಯಾಗ ಪೂಜೆ ಮಾಡಿಸಲಿ, ತಾವು ನಂಬಿದ ಶಕ್ತಿ ತಮ್ಮನ್ನು ಕೈ ಬಿಡಲ್ಲ ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗುಜರಾತ್​ ಗೇಮ್ ಝೋನ್​ನಲ್ಲಿ ಅಗ್ನಿ ದುರಂತ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ಕಟ್ಟೆಚ್ಚರ ವಹಿಸಲು ಡಿಕೆ ಶಿವಕುಮಾರ್ ಸೂಚನೆ