Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರದ ರಾಜಧಾನಿಯಲ್ಲಿ ಬೆಂಕಿಯುಗುಳುತ್ತಿರುವ ಸೂರ್ಯ, ಮಂಗಳವಾರದ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್!

ರಾಷ್ಟ್ರದ ರಾಜಧಾನಿಯಲ್ಲಿ ಬೆಂಕಿಯುಗುಳುತ್ತಿರುವ ಸೂರ್ಯ, ಮಂಗಳವಾರದ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್!

ಅರುಣ್​ ಕುಮಾರ್​ ಬೆಳ್ಳಿ
|

Updated on: May 30, 2024 | 4:18 PM

ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಉತ್ತರ ಭಾರತದ ಕೆಲ ಕ್ಷೇತ್ರಗಳಲ್ಲೂ ನಡೆಯಲಿದೆ. ಜನ ಮನೆಗಳಿಂದ ಹೊರಬಂದು ತಮ್ಮ ಹಕ್ಕು ಚಲಾಯಿಸುವ ಮುನ್ನ ಎರಡೆರಡು ಬಾರಿ ಯೋಚಿಸಲಿದ್ದಾರೆ. ಬೆಂಗಳೂರಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ತಲುಪಿದರೆ ನಾವು ಒದ್ದಾಡುತ್ತೇವೆ. ಇನ್ನು 50+ ತಾಪಮಾನ ಅಂದರೆ ಪರಿಸ್ಥಿತಿ ಹೇಗಿರಬೇಡ?

ದೆಹಲಿ: ರಾಷ್ಟ್ರದ ರಾಜಧಾನಿ (National capital Delhi) ಕಾದ ಹೆಂಚಿನಂತಾಗಿ ಅಕ್ಷರಶಃ ಬೆಂಕಿಯುಗುಳುತ್ತಿದೆ. ಕೇವಲ ದೆಹಲಿ ಮಾತ್ರವಲ್ಲ ಇಡೀ ಉತ್ತರ ಭಾರತದಲ್ಲಿ ತಾಪಮಾನ (temperature) ಅಸಹನೀಯವಾಗಿದೆ. ಟಿವಿ9 ದೆಹಲಿ ವರದಿಗಾರ ನೀಡುವ ಮಾಹಿತಿ ಪ್ರಕಾರ ದೆಹಲಿಯಲ್ಲಿ ಮಂಗಳವಾರಂದು ತಾಪಮಾನ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಇದು ನಗರದ ಕಳೆದ 50 ವರ್ಷಗಳ ಇತಿಹಾಸದಲ್ಲಿ ದಾಖಲಾಗಿರುವ ಅತ್ಯಧಿಕ ತಾಪಮಾನವಂತೆ! ಸುಡುವ ಬೇಸಿಗೆಯಿಂದಾಗಿ ದೆಹಲಿಯಲ್ಲಿ ಅಗ್ನಿ ಅವಘಡಗಳು (fire mishaps) ಹೆಚ್ಚು ಸಂಭವಿಸುತ್ತಿವೆ ಮತ್ತು ಬುಧವಾರ ಒಂದೇ ದಿನ 224 ಕರೆಗಳು ಅಗ್ನಿಶಾಮಕ ದಳ ಕಚೇರಿಗಳಿಗೆ ಹೋಗಿವೆಯಂತೆ. ದೆಹಲಿಯಂತೆ ಬಿಹಾರ ಸಹ ಕೊತಕೊತ ಕುದಿಯುತ್ತಿದೆ, ಅಲ್ಲಿನ ಭಿಗುಸರಾಯ್ ನಗರದಲ್ಲಿ ಶಾಲೆಯೊಂದರ ವಿದ್ಯಾರ್ಥಿನಿಯರು ಬಿಸಿಲಿನ ಝಳಕ್ಕೆ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಉತ್ತರ ಭಾರತದ ಕೆಲ ಕ್ಷೇತ್ರಗಳಲ್ಲೂ ನಡೆಯಲಿದೆ. ಜನ ಮನೆಗಳಿಂದ ಹೊರಬಂದು ತಮ್ಮ ಹಕ್ಕು ಚಲಾಯಿಸುವ ಮುನ್ನ ಎರಡೆರಡು ಬಾರಿ ಯೋಚಿಸಲಿದ್ದಾರೆ. ಬೆಂಗಳೂರಲ್ಲಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ತಲುಪಿದರೆ ನಾವು ಒದ್ದಾಡುತ್ತೇವೆ. ಇನ್ನು 50+ ತಾಪಮಾನ ಅಂದರೆ ಪರಿಸ್ಥಿತಿ ಹೇಗಿರಬೇಡ? ಮತಷ್ಟು ಕೆಟ್ಟ ಸುದ್ದಿಯೆಂದರೆ ಈ ವಾತಾವರಣ ಇನ್ನೂ ಎರಡು-ಮೂರು ವಾರಗಳ ಕಾಲ ಮುಂದುವರಿಯಲಿದೆಯಂತೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೆಹಲಿಯಲ್ಲಿ ಮತ್ತೊಂದು ಅಗ್ನಿ ಅವಘಡ, ವಸತಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ, 3 ಮಂದಿ ಸಾವು