ಪಂಚರತ್ನ ಯಾತ್ರೆ: ಹೆಚ್ ಡಿ ಕುಮಾರಸ್ವಾಮಿ ಜೊತೆಯಲ್ಲೂ ಒಬ್ಬ ರೌಡಿ ಶೀಟರ್, ರಾಜ್ಯದಲ್ಲಿ ಇನ್ನು ರೌಡಿಗಳದ್ದೇ ಕಾರುಬಾರು!

ಪಂಚರತ್ನ ಯಾತ್ರೆ: ಹೆಚ್ ಡಿ ಕುಮಾರಸ್ವಾಮಿ ಜೊತೆಯಲ್ಲೂ ಒಬ್ಬ ರೌಡಿ ಶೀಟರ್, ರಾಜ್ಯದಲ್ಲಿ ಇನ್ನು ರೌಡಿಗಳದ್ದೇ ಕಾರುಬಾರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 09, 2022 | 11:24 AM

ನೆಲಮಂಗಲ ವಿಧಾನ ಸಭೆ ಕ್ಷೇತ್ರದಲ್ಲಿ ಕಳೆದ ರಾತ್ರಿ ತೆರೆದ ವಾಹನದಲ್ಲಿ ಯಾತ್ರೆ ನಡೆಯುತ್ತಿದ್ದಾಗ, ಅವರ ಪಕ್ಕದಲ್ಲಿ ಹಿಸ್ಟರಿ ಶೀಟರ್ ರಂಗಸ್ವಾಮಿ ನಿಂತಿದ್ದ.

ನೆಲಮಂಗಲ: ಜೆಡಿ (ಎಸ್) ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಇತರ ನಾಯಕರು ಇನ್ನುಮುಂದೆ ಬಿಜೆಪಿಯನ್ನು (BJP) ರೌಡಿಗಳ ಪಕ್ಷ ಅಂತ ಕರೆಯಲಾರರು. ಯಾಕೆ ಗೊತ್ತಾ? ಈ ವಿಡಿಯೋ ನೋಡಿ. ಖುದ್ದು ಕುಮಾರಸ್ವಾಮಿಯವರೇ ತಮ್ಮ ಪಕ್ಕದಲ್ಲಿ ರೌಡಿ ಶೀಟರ್ ಒಬ್ಬನನ್ನು ಜೊತೆಯಾಗಿಸಿಕೊಂಡು ಪಂಚರತ್ನ ಯಾತ್ರೆ ನಡೆಸುತ್ತಿದ್ದಾರೆ. ನೆಲಮಂಗಲ ವಿಧಾನ ಸಭೆ ಕ್ಷೇತ್ರದಲ್ಲಿ ಕಳೆದ ರಾತ್ರಿ ತೆರೆದ ವಾಹನದಲ್ಲಿ ಯಾತ್ರೆ ನಡೆಯುತ್ತಿದ್ದಾಗ, ಅವರ ಎಡಪಕ್ಕ ಹಿಸ್ಟರಿ ಶೀಟರ್ ರಂಗಸ್ವಾಮಿ (history sheeter Rangaswamy) ನಿಂತಿದ್ದ. ನಮ್ಮ ರಾಜ್ಯವನ್ನು ಇನ್ನು ಮುಂದೆ ರೌಡಿಗಳು ಆಳುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ