ತನ್ನ ಪುಟ್ಟ ಮರಿಯೊಂದಿಗೆ ಆತಂಕದಿಂದ ಓಡಿದ ತಾಯಿ ಕಾಡಾನೆ ರಸ್ತೆಬದಿಯಲ್ಲಿದ್ದ ಸೈನೇಜ್ ಬೋರ್ಡನ್ನು ಬೀಳಿಸಿತು!
ಆನೆಗಳನ್ನು ಕಂಡ ಜನರು ಅವುಗಳನ್ನು ಓಡಿಸಲು ವಿಶಿಷ್ಟವಾದ ರೀತಿಯಲ್ಲಿ ಕೂಗಲಾರಂಭಿಸಿದ ಬಳಿಕ ಅತಂಕಕ್ಕೀಡಾಗುವ ತಾಯಿ ಆನೆ ತನ್ನ ಮರಿಯೊಂದಿಗೆ ಪಕ್ಕದ ಕಾಫಿ ತೋಟಕ್ಕೆ ನುಗ್ಗುತ್ತದೆ.
Hassan: ಕಾಡಾನೆಗಳು ಕಾಫಿ ಪ್ಲಾಂಟೇಶನ್ (coffee plantation) ಇಲ್ಲವೇ ಜಮೀನುಗಳಿಗೆ ನುಗ್ಗಿದಾಗ ಅವುಗಳನ್ನು ಅಲ್ಲಿಂದ ಹೆದರಿಸಿ ವಾಪಸ್ಸು ಕಾಡಿಗೆ ಓಡಿಸಲು ಅಲ್ಲಿನ ಆಯಾ ಭಾಗಗಳ ಜನ ಉಪಾಯಗಳನ್ನು ಕಂಡುಕೊಂಡಿರುತ್ತಾರೆ. ಹಾಸನ (Hassan) ಜಿಲ್ಲೆ ಬೇಲೂರು ತಾಲ್ಲೂಕಿನ ಮಲಸಾವರ (Malasavara) ಬಳಿ ತಾಯಿ ಆನೆಯೊಂದು ತನ್ನ ಪುಟ್ಟ ಮರಯೊಂದಿಗೆ ಒಂದು ಕಾಫಿ ತೋಟಕ್ಕೆ ನುಗ್ಗಿದೆ. ಆನೆಗಳನ್ನು ಕಂಡ ಜನರು ಅವುಗಳನ್ನು ಓಡಿಸಲು ವಿಶಿಷ್ಟವಾದ ರೀತಿಯಲ್ಲಿ ಕೂಗಲಾರಂಭಿಸಿದ ಬಳಿಕ ಅತಂಕಕ್ಕೀಡಾಗುವ ತಾಯಿ ಆನೆ ತನ್ನ ಮರಿಯೊಂದಿಗೆ ಪಕ್ಕದ ಕಾಫಿ ತೋಟಕ್ಕೆ ನುಗ್ಗುತ್ತದೆ. ಹಾಗೆ ಓಡುವಾಗ ರಸ್ತೆ ಬದಿಯಲ್ಲಿ ನೆಟ್ಟಿದ್ದ ಒಂದು ಸೈನೇಜ್ ಬೋರ್ಡಿಗೆ ಢಿಕ್ಕಿ ಹೊಡೆದು ಬೀಳಿಸುತ್ತದೆ.