A Pen Hospital in Kolkata: ಬಂಗಾಳದ ರಾಜಧಾನಿಯಲ್ಲಿರುವ ಪೆನ್ ಆಸ್ಪತ್ರೆ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲಿಂದ ಅಸ್ತಿತ್ವದಲ್ಲಿದೆ!
ರೂ. 100ರಿಂದ ಹಿಡಿದು ರೂ 20,000 ವರೆಗೆ ಬೆಲೆಯುಳ್ಳ ಬೇರೆ ಬೇರೆ ಬ್ರ್ಯಾಂಡ್ ಗಳ ಪೆನ್ ಗಳ ರಿಪೇರಿಯಲ್ಲಿ ಇಮ್ತಿಯಾಜ್ ಮತ್ತು ಅವರ ಸಹೋದರನ ಮಗ ಪರಿಣಿತಿ ಹೊಂದಿದ್ದಾರೆ.
ಕೊಲ್ಕತ್ತಾ: ನಾವೆಲ್ಲ ಸಾರ್ವಜನಿಕ ಆಸ್ಪತ್ರೆಗಳನ್ನು (community hospitals) ನೋಡಿದ್ದೇವೆ, ಹೋಗಿದ್ದೇವೆ; ಪಶು ವೈದ್ಯಕೀಯ ಆಸ್ಪತ್ರೆಗಳಿಗೂ ಹೋಗಿರುವ ಸಾಧ್ಯತೆ ಇದೆ. ಆದರೆ ಪೆನ್ ಗಳಿಗೆಂದೇ ಮೀಸಲಾಗಿರುವ ‘ಪೆನ್ ಆಸ್ಪತ್ರೆಯ’ (Pen Hospital) ಬಗ್ಗೆ ಕೇಳಿದ್ದೀರಾ? ಓಕೆ, ಕೊಲ್ಕತ್ತಾದ (Kolkata) ಧರ್ಮತಾಲಾ ಮೆಟ್ರೋ ಸ್ಟೇಷನ್ ನಿಂದ ಹೊರಬಿದ್ದರೆ, ಕಳೆದ 77 ವರ್ಷಗಳಿಂದ ಅಸ್ತಿತ್ವದಲ್ಲಿರುವ ‘ಪೆನ್ ಆಸ್ಪತ್ರೆ’ ನಿಮಗೆ ಕಾಣಿಸುತ್ತದೆ. ಅಂಗಡಿಯ ಮಾಲೀಕ ಮೊಹ್ಮದ್ ಇಮ್ತಿಯಾಜ್ ಹೇಳುವಂತೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಅವರ ತಾತ ಅದನ್ನು ಆರಂಭಿಸಿದರಂತೆ. ತಾತ ಮತ್ತು ತಂದೆಯ ನಂತರ ಇಮ್ತಿಯಾಜ್ ಶಾಪ್ ಅನ್ನು ನೋಡಿಕೊಳ್ಳುತ್ತಿದ್ದಾರೆ.
‘ಪೆನ್ ರಿಪೇರಿ ಮಾಡುವ ಬಿಸಿನೆಸ್ ಕಳೆದ 75 ವರ್ಷಗಳಿಂದ ನಾವು ನಡೆಸಿಕೊಂಡು ಬರುತ್ತಿದ್ದೇವೆ. ನನ್ನ ತಾತ ಇದನ್ನು ಆರಂಭಿಸಿದ ಬಳಿಕ ನನ್ನಪ್ಪ ಹಲವಾರು ವರ್ಷಗಳವರೆಗೆ ಅದನ್ನು ನಡೆಸಿದರು. ನನ್ನ ಕಿರಿಯ ಸಹೋದರ ನಿಧನ ಹೊಂದಿದ ಬಳಿಕ ನಾನು ಮತ್ತು ಅವನ ಮಗ ಇದನ್ನು ನೋಡಿಕೊಂಡು ಹೋಗುತ್ತಿದ್ದೇವೆ,’ ಎಂದು ಇಮ್ತಿಯಾಜ್ ಹೇಳುತ್ತಾರೆ.
ಇದನ್ನೂ ಓದಿ: Narendra Modi: ಮಾ. 25ರಂದು ರಾಜ್ಯಕ್ಕೆ ಮತ್ತೊಮ್ಮೆ ಮೋದಿ: ಇಲ್ಲಿದೆ ಪ್ರಧಾನಿ ಪ್ರವಾಸದ ಸಂಪೂರ್ಣ ವೇಳಾಪಟ್ಟಿ
ಜನರಿಗೆ ಪೆನ್ ಗಳ ಬಗ್ಗೆ ಅತೀವ ವ್ಯಾಮೋಹವಿರುವಿದರಿಂದಲೇ ಬಿಸಿನೆಸ್ ಏಳೂವರೆ ದಶಕಗಳಿದ ಚೆನ್ನಾಗಿ ನಡೆಯುತ್ತಿದೆ ಎಂದು ಇಮ್ತಿಯಾಜ್ ಹೇಳುತ್ತಾರೆ. ವಿದ್ಯಾರ್ಥಿಗಳು ಮತ್ತು ಉದ್ದಿಮೆದಾರರು ಸೇರಿದಂತೆ ಈಗ ಉತ್ಪಾದನೆ ನಿಂತುಹೋಗಿರುವ ಪೆನ್ ಗಳನ್ನು ಹೊಂದಿರುವ ಹಲವಾರು ಜನ ಅವುಗಳ ರಿಪೇರಿಗಾಗಿ ತಮ್ಮಲ್ಲಿಗೆ ಬರುತ್ತಾರೆ ಎಂದು ಅವರು ಹೇಳುತ್ತಾರೆ.
‘ಫೌಂಟೇನ್ ಪೆನ್ಗಳು ಈಗ ಚಾಲ್ತಿಯಲ್ಲಿಲ್ಲ, ಜನ ಉಪಯೋಗಿಸುವುದು ನಿಲ್ಲಿಸಿ ಬಿಟ್ಟಿದ್ದಾರೆ. ಆದರೆ ಅವುಗಳನ್ನು ಈಗಲೂ ಇಟ್ಟುಕೊಂಡಿರುವ ಜನ ನಿಬ್ ಖರೀದಿಸಲು ಮತ್ತು ರಿಪೇರಿ ಮಾಡಿಸಿಕೊಳ್ಳಲು ನಮ್ಮಲ್ಲಿಗೆ ಬರುತ್ತಾರೆ,’ ಎಂದು ಇಮ್ತಿಯಾಜ್ ಹೇಳುತ್ತಾರೆ.
ರೂ. 100ರಿಂದ ಹಿಡಿದು ರೂ 20,000 ವರೆಗೆ ಬೆಲೆಯುಳ್ಳ ಬೇರೆ ಬೇರೆ ಬ್ರ್ಯಾಂಡ್ ಗಳ ಪೆನ್ ಗಳ ರಿಪೇರಿಯಲ್ಲಿ ಇಮ್ತಿಯಾಜ್ ಮತ್ತು ಅವರ ಸಹೋದರನ ಮಗ ಪರಿಣಿತಿ ಹೊಂದಿದ್ದಾರೆ. ತುಂಡಾದ ಮತ್ತು ಕೆಟ್ಟುಹೋದ ಪೆನ್ ಗಳ ರಿಪೇರಿ ಇಲ್ಲಿ ಆಗುವ ಕಾರಣಕ್ಕೆ ಇಮ್ತಿಯಾಜ್ ಅವರ ತಾತ ಅಂಗಡಿಗೆ ‘ಪೆನ್ ಆಸ್ಪತ್ರೆ’ ಅಂತ ಹೆಸರಿಟ್ಟಿದ್ದಾರಂತೆ.
ಬರೆಯುವ ಅಭ್ಯಾಸವೇ ಕ್ರಮೇಣ ನಿಂತು ಹೋಗುತ್ತಿರುವ ಇವತ್ತಿನ ಜಮಾನಾದಲ್ಲಿ ಈ ಅಂಗಡಿಯು ಖಡ್ಗಕ್ಕಿಂತ ಪೆನ್ ಹೆಚ್ಚು ಬಲಶಾಲಿಯಾಗಿದೆ ಅನ್ನೋದನ್ನು ನಂಬುವವರಿಗೆ ವರದಾನವಾಗಿದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ