Karnataka Assembly Session; ಐಪಿಎಸ್ ಅಧಿಕಾರಿಗೆ ಲಾಠಿಚಾರ್ಜ್ ಆದೇಶ ನೀಡುವಾಗ ಡ್ರೆಸ್​ಕೋಡ್ ಹೇಗಿರಬೇಕೆಂದು ಗೊತ್ತಿರಲಿಲ್ಲ: ಯತ್ನಾಳ್

|

Updated on: Dec 12, 2024 | 8:24 PM

ಯತ್ನಾಳ್ ಮಾತಾಡುವಾಗ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರೊಂದಿಗೆ ಲಘು ಮಾತಿನ ಚಕಮಕಿ ನಡೆಯುತ್ತದೆ. ರಾಯರೆಡ್ಡಿ ಯಾವುದೋ ಮಾತಿಗೆ ಅಡ್ಡಿಯನ್ನುಂಟು ಮಾಡಿದಾಗ, ಸುಮ್ನೆ ಕೂತ್ಕೊಳ್ಳಿ ರಾಯರೆಡ್ಡಿಯರೇ, ನಮ್ಮ ಪ್ರತಿಭಟನೆಕಾರರ ಬಗ್ಗೆ ನಿಮಗೇನು ಗೊತ್ತು, ನೀವು ಶ್ರೀಮಂತರು ಅನ್ನೋದು ಗೊತ್ತಿದೆ ಎಂದು ಹೇಳುತ್ತಾ ಸಿದ್ದರಾಮಯ್ಯ ಸೂಚನೆ ಮೇರೆಗೆ ಲಾಠಿಚಾರ್ಜ್ ನಡೆದಿದೆ ಎನ್ನುತ್ತಾರೆ.

ಬೆಳಗಾವಿ: ಸರ್ಕಾರದ ವಿರುದ್ಧ ಅಡೆತಡೆಯಿಲ್ಲದೆ ದಾಳಿ ಮುಂದುವರಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಭಟನೆಕಾರರು ಕೂಲಿ ಕಾರ್ಮಿಕರು, ರೈತರ ಮಕ್ಕಳು, ಅಮಾಯಕರೇ ಹೊರತು ಭಯೋತ್ಪಾದಕರಲ್ಲ, ಬಾಂಬ್ ಸಿಡಿಸುವವರಲ್ಲ ಎಂದು ಹೇಳಿ ಎಡಿಜಿಪಿಯ ಹೆಸರು ತನಗೆ ಗೊತ್ತಿಲ್ಲ, ಅದರೆ ಸಿವಿಲ್ ಡ್ರೆಸ್ ನಲ್ಲಿ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಬಂದು ಲಾಟಿ ಚಾರ್ಜ್ ಗೆ ಆದೇಶ ನೀಡುತ್ತಾರೆ, ಅವರೊಬ್ಬ ಹಿರಿಯ ಪೊಲೀಸ್ ಅಧಿಕಾರಿ, ಲಾಠಿಚಾರ್ಜ್​ಗೆ ಆದೇಶ ನೀಡುವಾಗ ಡ್ರೆಸ್ ಕೋಡ್ ಹೇಗಿರಬೇಕು ಅಂತ ಗೊತ್ತಿಲ್ಲದಿರುವುದು ವಿಷಾದನೀಯ, ಕಾಲಲ್ಲಿ ಬೂಟಿಲ್ಲದ, ಸಮವಸ್ತ್ರ ಮತ್ತು ಶಿರಸ್ತ್ರಾಣ ಧರಿಸಿರದ ಅಧಿಕಾರಿಯೊಬ್ಬರು ಚಾರ್ಜ್ ಅಂತ ಆದೇಶ ನೀಡುತ್ತಾರೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಮೃತ್ಯುಂಜಯ ಸ್ವಾಮೀಜಿ, ಬಸನಗೌಡ ಯತ್ನಾಳ್