ಬೈ ಎಲೆಕ್ಷನ್ ಸೋಲು: TV ರಸ್ತೆಗೆ ಎಸೆದು ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತ

| Updated By: ರಮೇಶ್ ಬಿ. ಜವಳಗೇರಾ

Updated on: Nov 23, 2024 | 5:44 PM

ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎಲ್ಲಾ ಮೂರು ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದರಿಂದ ಎನ್​ಡಿಎಗೆ ಮುಖಭಂಗವಾಗಿದೆ. ಇನ್ನು ಸೋಲಿನಿಂದ ರೊಚ್ಚಿಗೆದ್ದಿರುವ ಬಿಜೆಪಿ ಹಿರಿಯ ಕಾರ್ಯಕರ್ತ ಟಿವಿ ಹೊಡೆದು ಹಾಕಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯಪುರ, (ನವೆಂಬರ್ 23): ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಎನ್​ಡಿಎ(ಬಿಜೆಪಿ-ಜೆಡಿಎಸ್​) ಸೋಲು ಕಂಡಿದೆ. ಹೀಗಾಗಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ. ಈ ಸೋಲಿನಿಂದಾಗಿ ಬಿಜೆಪಿ ಹಿರಿಯ ಕಾರ್ಯಕರ್ತ ಟಿವಿ ಹೊಡೆದು ಹಾಕಿದ್ದಾರೆ. ವಿಜಯಪುರ ಜಿಲ್ಲೆ ಕೋಲ್ಹಾರ ಪಟ್ಟಣದ ಬಿಜೆಪಿ ಅಭಿಮಾನಿ ವೀರಭದ್ರಪ್ಪ ಅವರು ಉಪಚುನಾವಣೆ ಸೋಲಿನಿಂದಾಗಿ ಮನೆಯಲ್ಲಿದ್ದ ಟಿವಿಯನ್ನು ಹೊರಗೆ ತಂದು ರಸ್ತೆಗೆ ಎಸೆದಿದ್ದಾರೆ. ಬಳಿಕ ಟಿವಿಗೆ ಕಲ್ಲಿನಿಂದ ಒಡೆದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಟಿವಿ ಒಡೆದ ಬಳಿಕ ಮಾತನಾಡಿರುವ ವೀರಭದ್ರಪ್ಪ. ಪ್ರಧಾನಿ ಮೋದಿ ಅವರು ರಾಜ್ಯದ ಬಿಜೆಪಿ ಮುಖಂಡರ ಸಭೆ ತೆಗೆದುಕೊಳ್ಳಬೇಕು. ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲದ ಕಾರಣ ಕಾರ್ಯಕರ್ತರು ಬಲಿಪಶುವಾಗುತ್ತಿದ್ದಾರೆ. ಬಿಜೆಪಿಯಲ್ಲಿನ ಎಲ್ಲಾ ನಾಯಕರು ಒಕ್ಕಟ್ಟಾಗಬೇಕಿದೆ. ಇಲ್ಲಂದರೆ ಲೀಡರ್ ಗಳ ಕೈಲಿ ಕಾರ್ಯಕರ್ತರು ಸಿಕ್ಕು ಬಲಿಯಾಗುತ್ತಾರೆ. ಬಸವನಗೌಡ ಪಾಟೀಲ್ ಯತ್ನಾಳ ಒಂದು ಕಡೆ ವಿಜಯೇಂದ್ರ ಒಂದು ಕಡೆ ಹೋಗುತ್ತಾರೆ. ಇವರನ್ನೇ ಮೂರ್ನಾಲ್ಕು ಭಾಗವಾದರೆ ಹೇಗೆ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

Published on: Nov 23, 2024 04:19 PM