‘ಚೇತನ್ ಬಗ್ಗೆ ಚಿಂತೆ ಬೇಡ, ಸ್ಟ್ರಾಂಗ್ ಆಗಿದ್ದಾರೆ’; ನ್ಯಾಯಾಂಗ ಬಂಧನ ಕುರಿತು ನಟನ ಪತ್ನಿ ಪ್ರತಿಕ್ರಿಯೆ
ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟ ಚೇತನ್ ಬಗ್ಗೆ ಅವರ ಪತ್ನಿ ಮೇಘಾ ಮಾತನಾಡಿದ್ದಾರೆ. ಬಂಧನದಿಂದ ಚೇತನ್ ಆತಂಕಕ್ಕೆ ಒಳಗಾಗಿಲ್ಲ ಎಂದು ಅವರು ಹೇಳಿದ್ದಾರೆ.
ವಿವಾದಾತ್ಮಕ ಟ್ವೀಟ್ಗೆ ಸಂಬಂಧಿಸಿದಂತೆ ನಟ ಚೇತನ್ ಕುಮಾರ್ (Chetan Ahimsa) ಬಂಧನವಾಗಿದೆ. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ. ಅನೇಕರು ಚೇತನ್ ಪರವಾಗಿ ಧ್ವನಿ ಎತ್ತಿದ್ದಾರೆ. ಜಾಮೀನು ಕೊಡಿಸಲು ‘ಆ ದಿನಗಳು’ ಚೇತನ್ ಕುಮಾರ್ (Aa Dinagalu Chetan Kumar) ಪತ್ನಿ ಮೇಘಾ ಪ್ರಯತ್ನಿಸುತ್ತಿದ್ದಾರೆ. ಒಟ್ಟಾರೆ ಘಟನೆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಚೇತನ್ ತುಂಬ ಚೆನ್ನಾಗಿ ಇದ್ದಾರೆ. ಯಾರೂ ಚಿಂತೆ ಮಾಡಬೇಡಿ. ಅವರು ಧೈರ್ಯವಾಗಿದ್ದಾರೆ. ಈ ಘಟನೆಯಿಂದ ಅವರಿಗೆ ಏನೂ ತೊಂದರೆ ಆಗುವುದಿಲ್ಲ. ಅವರು ಆತಂಕಕ್ಕೆ ಒಳಗಾಗಿಲ್ಲ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಜನರು ನನಗೆ ಕರೆ ಮಾಡುತ್ತಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ನಮ್ಮ ವಕೀಲರ ತಂಡ ಇದೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ’ ಎಂದು ಚೇತನ್ ಕುಮಾರ್ ಪತ್ನಿ ಮೇಘಾ (Chetan Kumar Wife Megha) ಹೇಳಿದ್ದಾರೆ. ಸಿನಿಮಾ ಹೊರತಾಗಿ ಹಲವು ಕಾರಣಗಳಿಂದಾಗಿ ಚೇತನ್ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಸಿದ್ಧಾಂತದ ಕಾರಣದಿಂದ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದಾರೆ. ಚೇತನ್ಗೆ 8ನೇ ಎಸಿಎಂಎಂ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ:
‘ಚೇತನ್ ಅಪಹರಣವಾಗಿದೆ’ ಎಂದ ಪತ್ನಿ ಮೇಘಾ; ಅವರನ್ನು ಬಂಧಿಸಿದ್ದೇವೆ ಎಂದ ಪೊಲೀಸರು
‘ಮೇಕೆದಾಟು ಅಣೆಕಟ್ಟಿನಿಂದ ಪ್ರಕೃತಿಗೆ ಒಳ್ಳೆಯದಾಗಲ್ಲ’; ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ನಟ ಚೇತನ್