ಕಾರ್ಕಳ ಅತ್ಯಾಚಾರ ಪ್ರಕರಣ: ಆರೋಪಿ ಅಲ್ತಾಫ್ ಜೊತೆಯಿದ್ದ ಇನ್ನಿಬ್ಬರು ಸಹ ಅಪರಾಧದಲ್ಲಿ ಭಾಗಿಯೇ?
ಅಬಲೆ ಮತ್ತು ಅಸಹಾಯಕ ಮಹಿಳೆಯರ ಜೊತೆ ಮೃಗೀಯವಾಗಿ ವರ್ತಿಸುವವನು ಹೇಡಿ ಮತ್ತು ಪಶುಗಳಿಗಿಂತ ಕಡೆ. ಕಾರ್ಕಳ ಪ್ರಕರಣದಲ್ಲಿ ಸಂತ್ರಸ್ತೆ ಆರೋಪಿಗೆ ಪರಿಚಿತಳು. ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಅಲ್ತಾಫ್ ಹೆಸರಿನ ಆರೋಪಿ ಅತ್ಯಾಚಾರವೆಗಿದ್ದಾನೆ. ಅತ್ಯಾಚಾರಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಿದಾಗ ಮಾತ್ರ ಇಂಥ ಪ್ರಕರಣಗಳು ಕಮ್ಮಿಯಾಗಬಹುದು.
ಉಡುಪಿ: ದೇಶದ ನಾನಾ ಭಾಗಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಅಂಶವಾಗಿದೆ. ಜಿಲ್ಲೆಯ ಕಾರ್ಕಳ ತಾಲೂಕಿನ ಗೌಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಬ್ಬ ಹಿಂದೂ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು ಘಟನೆ ನಡೆದ ಸ್ಥಳದಿಂದ ನಮ್ಮ ಉಡುಪಿ ವರದಿಗಾರ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಅಲ್ತಾಫ್ ಮತ್ತು ಇವನಿಗೆ ಮದ್ಯ ತಂದುಕೊಟ್ಟ ಇನ್ನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವರದಿಗಾರ ಹೇಳುವಂತೆ ಶುಕ್ರವಾರದಂದು ಮಧ್ಯಾಹ್ನ 12 ಗಂಟೆಗೆ ಅಲ್ತಾಫ್ ಸಂತ್ರಸ್ತೆಯನ್ನು ಕಾರ್ಕಳದಿಂದ 15 ಕಿಮೀ ದೂರವಿರುವ ಈ ನಿರ್ಜನ ಪ್ರದೇಶಕ್ಕೆ ಕರೆತಂದಿದ್ದಾನೆ. ವಾಹನವೊಂದರಲ್ಲಿ ಯುವತಿ ಮತ್ತು ಅಲ್ತಾಫ್ ಮಾತ್ರ ಬಂದಿದ್ದಾರೆ. ಅದರೆ ತಾನು ತಂದಿದ್ದ ಲಿಕ್ಕರ್ ಮುಗಿದುಹೋದ ಕಾರಣ ತನ್ನಿಬ್ಬರು ಸ್ನೇಹಿತರಿಗೆ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ.
ಸಂತ್ರಸ್ತೆಯ ದೂರಿನ ಪ್ರಕಾರ ಮದ್ಯದಲ್ಲಿ ಮತ್ತು ಬರಿಸುವ ವಸ್ತುವನ್ನು ಬೆರೆಸಿ ಆಕೆಗೆ ಕುಡಿಸಲಾಗಿದೆ. ಆಕೆ ಪ್ರಜ್ಞೆ ತಪ್ಪಿದ ನಂತರ ಅಲ್ತಾಫ್ ಅತ್ಯಾಚಾರವೆಸಗಿದ್ದಾನೆ. ಲೈಂಗಿಕ ಅತ್ಯಾಚಾರ ಅವನೊಬ್ಬನೇ ನಡೆಸಿದನೋ ಅಥವಾ ಮದ್ಯ ತಂದ ಇಬ್ಬರು ಸ್ನೇಹಿತರು ಸಹ ಭಾಗಿಯಾಗಿದ್ದರೋ ಅನ್ನೋದು ತನಿಖೆಯ ನಂತರವೇ ಗೊತ್ತಾಗಬೇಕು. ಸಂತ್ರಸ್ತೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ಅತ್ಯಾಚಾರ ಎಸಗಿರುವುದು ನಿಜ, ವಿಡಿಯೋಗಳೆಲ್ಲವೂ ಅಸಲಿ: ಎಸ್ಐಟಿ