ಹುಟ್ಟುಹಬ್ಬದಂದೇ ಕಿರುತೆರೆ ನಟ ಸಾವು: ಆಸ್ಪತ್ರೆಯಲ್ಲೇ ಕೇಕ್ ಕತ್ತರಿಸಿದ ಕುಟುಂಬ, ಅಂಗಾಂಗ ದಾನ
ಸಿನಿಮಾ ಮತ್ತು ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಬೈಕ್ ಅಪಘಾತದಿಂದ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಹುಟ್ಟುಹಬ್ಬದ ದಿನವೇ ಆರ್ಯನ್ ನಿಧನರಾಗಿದ್ದಾರೆ. ಕುಟುಂಬದವರು ಮೃತದೇಹದ ಕೈ ಹಿಡಿದು ಕೇಕ್ ಕತ್ತರಿಸುವ ಮೂಲಕ ಅಂತಿಮ ಶ್ರದ್ಧಾಂಜಲಿ ಸಲ್ಲಿಸಿದರು. ಜೊತೆಗೆ, ಆರ್ಯನ್ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಕೊಪ್ಪಳ, ಅಕ್ಟೋಬರ್ 25: ಸಿನಿಮಾ ಮತ್ತು ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ವಸ್ತ್ರದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಮೂಲದ ಆರ್ಯನ್ ಬೆಂಗಳೂರಲ್ಲಿ ನೆಲಸಿದ್ದ. ಹಾಸನಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿ ಗಾಯಗೊಂಡಿದ್ದ. ನಿನ್ನೆ ಹುಟ್ಟುಹಬ್ಬದ ದಿನವೇ ಆರ್ಯನ್ ಮೃತಪಟ್ಟಿದ್ದಾರೆ. ಆತನ ಕೈ ಹಿಡಿದು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಆರ್ಯನ್ ಅಂಗಾಂಗ ದಾನ ಮಾಡಿ ಕುಟುಂಬ ಸಾರ್ಥಕತೆ ಮೆರೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
