AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಚೇಸ್ ಕಿಂಗ್ ಕೊಹ್ಲಿಯ ರನ್ ಓಟಕ್ಕೆ ಕ್ರಿಕೆಟ್ ದೇವರ ದಾಖಲೆ ಧ್ವಂಸ

IND vs AUS: ಚೇಸ್ ಕಿಂಗ್ ಕೊಹ್ಲಿಯ ರನ್ ಓಟಕ್ಕೆ ಕ್ರಿಕೆಟ್ ದೇವರ ದಾಖಲೆ ಧ್ವಂಸ

ಪೃಥ್ವಿಶಂಕರ
|

Updated on: Oct 25, 2025 | 6:05 PM

Share

Virat Kohli Breaks Sachin's Record: ವಿರಾಟ್ ಕೊಹ್ಲಿ ಸಿಡ್ನಿಯಲ್ಲಿ ಅಜೇಯ 74 ರನ್ ಗಳಿಸಿ, ಏಕದಿನ ರನ್ ಚೇಸಿಂಗ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿದ ಸಚಿನ್ ತೆಂಡೂಲ್ಕರ್ ದಾಖಲೆ (69) ಮುರಿದು ಹೊಸ ಮೈಲುಗಲ್ಲು (70) ತಲುಪಿದರು. ಈ ಪ್ರದರ್ಶನದಿಂದ ಅವರು ಆಸ್ಟ್ರೇಲಿಯಾದಲ್ಲಿನ ತಮ್ಮ ಹಿಂದಿನ ಕಳಪೆ ಫಾರ್ಮ್‌ ಅನ್ನು ಸುಧಾರಿಸಿಕೊಂಡು, ತಮ್ಮ ರನ್ ಚೇಸಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ರನ್ ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿಗೆ ಸರಿಸಾಟಿ ಯಾರಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಖಾತೆ ತೆರೆಯುವುದರ ಜೊತೆಗೆ ಅಜೇಯ 74 ರನ್ ಬಾರಿಸಿದ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಪ್ರಮುಖ ದಾಖಲೆಯನ್ನು ಮುರಿದರು. ಅಷ್ಟೇ ಅಲ್ಲ, ಸಿಡ್ನಿಯಲ್ಲಿ ತಮ್ಮ ಹಿಂದಿನ ಕಳಪೆ ದಾಖಲೆಯನ್ನು ಸ್ವಲ್ಪ ಸುಧಾರಿಸಿಕೊಳ್ಳುವ ಮೂಲಕ, ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ಹಿಂದಿನ 10 ಇನ್ನಿಂಗ್ಸ್‌ಗಳ ವೈಫಲ್ಯವನ್ನು ಕೊನೆಗೊಳಿಸಿದರು.

ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ , ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಐವತ್ತು ಪ್ಲಸ್ ಸ್ಕೋರ್ ದಾಖಸಿದರು. ಇದರೊಂದಿಗೆ, ಅವರು ಏಕದಿನ ರನ್ ಚೇಸಿಂಗ್‌ನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಸಚಿನ್ ತೆಂಡೂಲ್ಕರ್ ಏಕದಿನ ರನ್ ಚೇಸಿಂಗ್‌ನಲ್ಲಿ 69 ಬಾರಿ ಐವತ್ತು ಪ್ಲಸ್ ಸ್ಕೋರ್‌ ಗಳಿಸಿದ್ದರು. ಇತ್ತ ವಿರಾಟ್ ಕೊಹ್ಲಿ ಸಿಡ್ನಿಯಲ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 70 ನೇ ಬಾರಿಗೆ ಐವತ್ತು ಪ್ಲಸ್ ಸ್ಕೋರ್ ಗಡಿ ದಾಟಿದರು.

ಸಿಡ್ನಿಯಲ್ಲಿ ತಮ್ಮ ಏಕದಿನ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಡುವ ಮೂಲಕ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಿದರು ಮಾತ್ರವಲ್ಲದೆ , ಆಸ್ಟ್ರೇಲಿಯಾದಲ್ಲಿ ಅವರ ಹಿಂದಿನ 10 ಇನ್ನಿಂಗ್ಸ್‌ಗಳ ವೈಫಲ್ಯಗಳನ್ನು ಸಹ ನಿವಾರಿಸಿದರು. ಕೊಹ್ಲಿ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ತಮ್ಮ ಹಿಂದಿನ 10 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕವಿಲ್ಲದೆ ಕೇವಲ 90 ರನ್‌ಗಳನ್ನು ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ