AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

Video: ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಅಕ್ಷಯ್​ ಪಲ್ಲಮಜಲು​​
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 25, 2025 | 6:33 PM

Share

ಡಿ.ಕೆ. ಶಿವಕುಮಾರ್ ತಮ್ಮ ಪುತ್ರ ರಾಜಕೀಯಕ್ಕೆ ಬರಬಾರದು ಎಂದು ಸಲಹೆ ನೀಡಿದ್ದಾರೆ. ನಿರಂತರವಾಗಿ ಎದುರಾಗುವ ನೋಟಿಸ್‌ಗಳು ಮತ್ತು ಕಾನೂನು ಹೋರಾಟಗಳಿಂದಾಗಿ ಪುತ್ರನನ್ನು ವಕೀಲನನ್ನಾಗಿ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ರಾಮಯ್ಯ ಕಾಲೇಜಿನಲ್ಲಿ ಕಾನೂನು ಪದವಿ ಕಲಿಯುತ್ತಿರುವ ತಮ್ಮ ಪುತ್ರ ಸಮಾಜಕ್ಕೆ ಕೆಲಸ ಮಾಡಲಿ ಎಂದು ಅವರು ಆಶಿಸಿದ್ದಾರೆ.

ಬೆಂಗಳೂರು, ಅ.25: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತಮ್ಮ ಪುತ್ರನ ರಾಜಕೀಯ ಪ್ರವೇಶದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ತಮ್ಮ ಮೇಲೆ ಮಾಡಿರುವ ಹಲವು ಆರೋಪಗಳು ಹಾಗೂ ನನಗೆ ನೀಡಿದ ನಿರಂತರ ಕಾನೂನು ನೋಟಿಸ್‌ಗಳು ಮತ್ತು ನ್ಯಾಯಾಲಯದ ಹೋರಾಟಗಳಿಂದಾಗಿ ನನ್ನ ಪುತ್ರ ರಾಜಕೀಯಕ್ಕೆ ಬರುವುದು ಬೇಡ, ಬದಲಿಗೆ ಅವನು ವಕೀಲನಾಗಬೇಕು ಎಂದು ಹೇಳಿದ್ದಾರೆ. ಈ ಹಿಂದೆಯೂ ಡಿಕೆ ಶಿವಕುಮಾರ್​​ ಅವರು ನನ್ನ ಮಗ ವಕೀಲನಾಗಿ, ನನ್ನ ಮೇಲೆ ಮಾಡಿರುವ ಆರೋಪಗಳಿಗೆ ಅವನು ಕಾನೂನು ಪ್ರಕಾರ ಉತ್ತರ ನೀಡಬೇಕು ಎಂದು ಹೇಳಿದ್ದರು. ಇದೀಗ ಅವರ ಪುತ್ರ ರಾಮಯ್ಯ ಕಾಲೇಜಿನಲ್ಲಿ ಕಾನೂನು ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನನಗೆ ಪ್ರತಿದಿನ ನೋಟಿಸ್‌ಗಳು ಬರುತ್ತವೆ, ಸಾಯುವವರೆಗೂ ಅವು ನನ್ನನ್ನು ಬಿಡುವುದಿಲ್ಲ. ಹಾಗಾಗಿ ನೀನು ಲಾಯರ್ ಆಗು” ಎಂದು ಪುತ್ರನಿಗೆ ಕಿವಿ ಮಾತು ಹೇಳಿದ್ದೇನೆ. ಅಧಿಕಾರವು ಸ್ನೇಹಿತರನ್ನು, ಶತ್ರುಗಳನ್ನು ಸೃಷ್ಟಿಸುತ್ತದೆ ಹಾಗೂ ಜನರಿಗೆ ಸಹಾಯ ಮಾಡಲು ಅಥವಾ ತೊಂದರೆ ನೀಡಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ, ನನ್ನ ಪುತ್ರ ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡಲಿ ಎಂದು ಶಿವಕುಮಾರ್ ಹೇಳಿದ್ದಾರೆ. ಇನ್ನು ಈ ವೇಳೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನನಗೆ ಪದವಿ ಮುಗಿಸಲು ಅವಕಾಶ ಸಿಗಲಿಲ್ಲ, 2007-08ರಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೋಹಿತ್ ಕುಮಾರ್ ಅವರ ಕಾನೂನು ಹೋರಾಟ ಮತ್ತು ರಾಜ್ಯಕ್ಕೆ ಒಳ್ಳೆಯ ಹೆಸರು ತಂದಿರುವುದನ್ನು ಶ್ಲಾಘಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 25, 2025 05:33 PM