AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್

ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್

ಮಂಗಳ ರಾಜ್
| Edited By: |

Updated on: Mar 26, 2026 | 9:43 PM

Share

ಪ್ರಥಮ್ ನಟಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ ಚಿತ್ರ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈ ಚಿತ್ರದ ಶೀರ್ಷಿಕೆಗೆ ‘ಸುಬ್ಬ ಸುಬ್ಬಿ ಹಾರರ್ ಸ್ಟೋರಿ’ ಎನ್ನುವ ಟ್ಯಾಗ್ ಲೈನ್ ಇದೆ. ಈ ಕಥೆ ಯಾರಿಗಾದರೂ ಲಿಂಕ್ ಆಗುತ್ತಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಪ್ರಥಮ್ ಉತ್ತರ ನೀಡಿದ್ದಾರೆ.

ಪ್ರಥಮ್ ಅವರು ನಟಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ (First Night With Devva) ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾದ ಶೀರ್ಷಿಕೆಗೆ ‘ಸುಬ್ಬ ಸುಬ್ಬಿ ಹಾರರ್ ಸ್ಟೋರಿ’ ಎಂಬ ಟ್ಯಾಗ್ ಲೈನ್ ಇದೆ. ಈ ಕಥೆ ಯಾರಿಗಾದರೂ ಲಿಂಕ್ ಆಗುತ್ತಾ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ಪ್ರಥಮ್ ಅವರು ಉತ್ತರ ನೀಡಿದ್ದಾರೆ. ‘ಮೊದಲ ದೃಶ್ಯದಲ್ಲೇ ಮದುವೆ. ಮದುವೆ ಆಗಿ 10 ನಿಮಿಷದ ಬಳಿಕ ನನ್ನ ಹೆಂಡತಿ ಮೈ ಮೇಲೆ ದೆವ್ವ ಇದೆ ಎಂಬುದು ಗೊತ್ತಾಗುತ್ತದೆ. ಹನಿಮೂನ್ ಆಗುತ್ತಾ ಅಥವಾ ಆ ದೆವ್ವ ಸೇಡು ತೀರಿಸಿಕೊಳ್ಳುತ್ತಾ ಎಂಬುದೇ ಕಥೆ. ಕಥೆಗೆ ಸೂಕ್ತ ಎಂಬ ಕಾರಣಕ್ಕೆ ಸುಬ್ಬ ಸುಬ್ಬಿ ಅಂತ ಇಟ್ಟಿದ್ದೇವೆ. ಕರ್ನಾಟಕದಲ್ಲಿ 7 ಕೋಟಿ ಜನರು ಇದ್ದಾರೆ. ಒಬ್ಬರ ಕಥೆ, ಮಾತು ಇನ್ನೊಬ್ಬರಿಗೆ ಲಿಂಕ್ ಆಗುತ್ತದೆ’ ಎಂದು ಪ್ರಥಮ್ (Pratham) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಂಗಳ ರಾಜ್
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More