ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕಾಗಿ ಒಂದೇ ಸಮಯಕ್ಕೆ ಆಗಮಿಸಿದ ರಕ್ಷಿತಾ ಪ್ರೇಮ್ ಮತ್ತು ಅನುಶ್ರೀ

Updated on: May 12, 2025 | 6:11 PM

ಅಗಲಿದ ರಾಕೇಶ್ ಪೂಜಾರಿಯ ಅಂತಿಮ ದರ್ಶನಕ್ಕಾಗಿ ಬೆಂಗಳೂರಿಂದ ಧಾವಿಸಿ ಬಂದ ರಕ್ಷಿತಾ ಶವಪೆಟ್ಟಿಗೆಯಲ್ಲಿ ಮಾತಾಡದೆ ಮಲಗಿದ್ದ ಕಾಮಿಡಿ ಕಿಲಾಡಿಯನ್ನು ತದೇಕದೃಷ್ಟಿಯಿಂದ ನೋಡುತ್ತಾ ನಿಂತುಬಿಟ್ಟರು. ರಾಕೇಶ್​ನೆಡೆ ಅವರಿಗಿದ್ದ ವಾತ್ಸಲ್ಯ ಮಮತೆ ಆಶ್ಚರ್ಯ ಹುಟ್ಟಿಸುತ್ತದೆ. ರಾಕೇಶ್ ಸಾವಿಗೆ ಎಲ್ಲರಿಗಿಂತ ಮೊದಲು ಟ್ವೀಟ್ ಮಾಡಿದ್ದು ರಕ್ಷಿತಾ ಎಂದರೆ ಉತ್ಪ್ರೇಕ್ಷೆ ಅನಿಸದು. ಅತ್ತು ಅತ್ತು ಕಣ್ಣೀರು ಬತ್ತಿಹೋಗಿದ್ದ ರಾಕೇಶ್ ತಾಯಿ ಮತ್ತು ಸಹೋದರಿಯನ್ನು ರಕ್ಷಿತಾ ಸಂತೈಸಿದರು.

ಉಡುಪಿ, ಮೇ 12: ಚಿತ್ರನಟಿ ಮತ್ತು ಕನ್ನಡ ರಿಯಾಲಿಟಿ ಶೋಗಳ ಜಡ್ಜ್ ಆಗಿರುವ ರಕ್ಷಿತಾ ಪ್ರೇಮ್ (Rakshita Prem) ಮತ್ತು ನಿನ್ನೆ ರಾತ್ರಿ ಹಠಾತ್ ಹೃದಯಘಾತದಿಂದ ನಿಧನರಾದ ರಾಕೇಶ್ ಪೂಜಾರಿ ನಡುವಿನ ಬಾಂಧವ್ಯ, ಪ್ರೀತಿ, ಅನ್ಯೋನ್ಯತೆ ಪದಗಳಲ್ಲಿ ಹೇಳಲಾಗದು. ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರು ನಿಟ್ಟೆಗೆ ಬಂದ ಸಮಯದಲ್ಲೇ ರಕ್ಷಿತಾ ಕೂಡ ಬಂದರು. ಲವಲವಿಕೆಯಿಂದ ಎಲ್ಲರನ್ನು ನಗಿಸುತ್ತಾ ಓಡಾಡುತ್ತಾ ಮಾತಾಡಿಕೊಂಡಿರುತ್ತಿದ್ದ ರಾಕೇಶ್ ನಿಶ್ಚಲನಾಗಿ ಪೆಟ್ಟಿಗೆಯಲ್ಲಿ ಮಲಗಿದ್ದನ್ನು ನೋಡಿ ಅನುಶ್ರೀ ತುಂಬಾ ಭಾವುಕರಾಗಿಬಿಟ್ಟರು. ನಂತರ ಅನುಶ್ರೀ ರಾಕೇಶ್ ತಾಯಿಯನ್ನು ಸಂತೈಸಿದರು ಮತ್ತು ರಾಕೇಶ್ ಮಿತ್ರರೊಂದಿಗೆ ಮಾತಾಡಿದರು.

ಇದನ್ನು ಓದಿ:  ಕಣ್ಣೀರಿಡುತ್ತ ಹಣೆಗೆ ಮುತ್ತಿಟ್ಟು ಕಣ್ಣೀರಿಂದಲೇ ಅಣ್ಣನ ಪಾದ ತೊಳೆದ ರಾಕೇಶ್ ಪೂಜಾರಿ ಸಹೋದರಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ