ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ ಬಗ್ಗೆ ತಿಲಕ್ ಮೆಚ್ಚುಗೆಯ ಮಾತು

ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್ ಬಗ್ಗೆ ತಿಲಕ್ ಮೆಚ್ಚುಗೆಯ ಮಾತು

TV9 Web
| Updated By: ಮದನ್​ ಕುಮಾರ್​

Updated on: Apr 20, 2022 | 8:50 AM

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ಚಿತ್ರದಲ್ಲಿ ತಿಲಕ್ ಮೊದಲಾದವರು ನಟಿಸಿದ್ದಾರೆ. ಈ ಕಾರ್ಯಕ್ರಮದ ವೇಳೆ ಅವರು ‘ಕೆಜಿಎಫ್ 2’ ಬಗ್ಗೆ ಮಾತನಾಡಿದ್ದಾರೆ.

‘ಕೆಜಿಎಫ್ ಚಾಪ್ಟರ್ 2’ ಸಿನಿಮಾ (KGF Chapter 2) ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಈ ಚಿತ್ರ ಮಾಡಿದ ಮೋಡಿ​ ನಿಜಕ್ಕೂ ದೊಡ್ಡದು. ಸಿನಿಮಾ ಬಗ್ಗೆ ಪರಭಾಷೆಯವರೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈಗ ಚಿತ್ರದ ಬಗ್ಗೆ ನಟ ತಿಲಕ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದ (Kaneyadavara Bagge Prakatane) ಸುದ್ದಿಗೋಷ್ಠಿ ನಡೆಯಿತು. ಈ ಚಿತ್ರದಲ್ಲಿ ತಿಲಕ್ ಮೊದಲಾದವರು ನಟಿಸಿದ್ದಾರೆ. ಈ ಕಾರ್ಯಕ್ರಮದ ವೇಳೆ ಅವರು ‘ಕೆಜಿಎಫ್ 2’ ಬಗ್ಗೆ ಮಾತನಾಡಿದ್ದಾರೆ. ‘ಕೆಜಿಎಫ್ 2 ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇದು ನಿಜಕ್ಕೂ ಖುಷಿಯ ವಿಚಾರ’ ಎಂದರು ತಿಲಕ್ (Actor Tilak). ‘ಕಾಣೆಯಾದವರ ಬಗ್ಗೆ ಪ್ರಕಟಣೆ’  ಚಿತ್ರದಲ್ಲಿ ರಂಗಾಯಣ ರಘು, ತಬಲಾ ನಾಣಿ, ರವಿಶಂಕರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್, ಡಾಲಿ ಧನಂಜಯ್ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಎದುರು ಮಕಾಡೆ ಮಲಗಿದ ‘ಬೀಸ್ಟ್​’; ಕಲೆಕ್ಷನ್ ಅಂತರ ಎಷ್ಟು?

Fact Check: ‘ಕೆಜಿಎಫ್ 2’ ಬಗ್ಗೆ ಸುದೀಪ್​ ರಿಯಾಕ್ಷನ್ ನೀಡಿದ್ದಾರೆ ಎಂಬ ವಿಡಿಯೋದ ಅಸಲಿಯತ್ತೇನು?