Loading video

ಭೇಟಿಯಾಗಲು ಬಂದ ಉಮಾಶ್ರೀ ಜೊತೆ ಹಾಡು ಹೇಳಿದ ಹಿರಿಯ ನಟಿ ಲೀಲಾವತಿ

|

Updated on: Jul 09, 2023 | 10:01 PM

Umashree: ನಟಿ ಉಮಾಶ್ರೀ, ಪದ್ಮಾ ವಾಸಂತಿ ಇತರರು ಹಿರಿಯ ನಟಿ ಲೀಲಾವತಿಯರ ನಿವಾಸಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಉಮಾಶ್ರೀಯೊಟ್ಟಿಗೆ ಲೀಲಾವತಿ ಹಾಡು ಹಾಡಿದರು.

ಹಿರಿಯ ನಟಿ ಲೀಲಾವತಿ (Leelavathi) ಬದುಕಿನ ಇಳಿಸಂಜೆಯಲ್ಲಿದ್ದಾರೆ. ನೆಲಮಂಗಲದಲ್ಲಿ ತೋಟ ಮಾಡಿಕೊಂಡು ತಾಯಿಯ ಸೇವೆ ಮಾಡುತ್ತಾ ಜೊತೆಗಿಷ್ಟು ಸಮಾಜ ಸೇವೆ ಮಾಡುತ್ತಾ ಬದುಕುತ್ತಿದ್ದಾರೆ ಅವರ ಮಗ ವಿನೋದ್ ರಾಜ್ (Vnod Raj). ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರನ್ನು ಚಿತ್ರರಂಗದ ಈಗಿನ ನಟರು ಹೋಗಿ ಆಗಾಗ್ಗೆ ಭೇಟಿ ಮಾಡಿಕೊಂಡು ಬರುತ್ತಿದ್ದಾರೆ. ಇಂದು (ಜುಲೈ 09) ನಟಿ ಉಮಾಶ್ರೀ, ಪದ್ಮಾ ವಾಸಂತಿ ಇತರರು ಲೀಲಾವತಿಯವರ ಮನೆಗೆ ತೆರಳಿ ಭೇಟಿಯಾಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಉಮಾಶ್ರೀ ಒಟ್ಟಿಗೆ ಸೇರಿ ಹಾಡು ಹಾಡಿದ್ದಾರೆ ಲೀಲಾವತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ