ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ
ಏರೋ ಇಂಡಿಯಾ ಏರ್ ಶೋ 2027 ದಿನಾಂಕ: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2027ರ ದಿನಾಂಕಗಳನ್ನು ಘೋಷಿಸಲಾಗಿದೆ. 2027ರ ಫೆಬ್ರವರಿ 8 ರಿಂದ 12ರ ವರೆಗೆ ನಡೆಯಲಿರುವ ಈ 16ನೇ ಆವೃತ್ತಿಯ ಏರ್ ಶೋಗೆ ಸಿದ್ಧತೆಗಳು ಶುರುವಾಗಿವೆ. ಇದು ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು, ತಜ್ಞರು ಹಾಗೂ ನೀತಿ ನಿರೂಪಕರು ಒಂದೇ ಸೂರಿನಡಿ ಸೇರುವ ಹೆಮ್ಮೆಯ ಸಂಗತಿಯಾಗಿದೆ.
ಬೆಂಗಳೂರು, ಸೆಪ್ಟೆಂಬರ್ 3: ಬೆಂಗಳೂರು ಮತ್ತೆ ವಾಯು ಪ್ರದರ್ಶನದ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಪ್ರತಿಷ್ಠಿತ ‘ಏರೋ ಇಂಡಿಯಾ 2027’ರ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. 2027ರ ಫೆಬ್ರವರಿ 8ನೇ ತಾರೀಖಿನಿಂದ 12ನೇ ತಾರೀಖಿನವರೆಗೆ, ಐದು ದಿನಗಳ ಕಾಲ ಈ ಬೃಹತ್ ಏರ್ ಶೋ ನಡೆಯಲಿದೆ. ಸದಾ ಈ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸುವ ಯಲಹಂಕ ವಾಯುನೆಲೆ ಈ ಬಾರಿಯೂ 16ನೇ ಆವೃತ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
ಈ ಬಾರಿಯ ಏರೋ ಇಂಡಿಯಾ ಪ್ರದರ್ಶನವನ್ನು ರಕ್ಷಣಾ ಉತ್ಪಾದನೆಯ ಪರವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಪ್ರಮುಖ ನೋಡಲ್ ಏಜೆನ್ಸಿಯಾಗಿ ಆಯೋಜಿಸಲಿದೆ. ಇದು ರಕ್ಷಣಾ ಕ್ಷೇತ್ರದ ಪ್ರಮುಖ ಚಟುವಟಿಕೆಯಾಗಿದೆ. ಏರೋ ಇಂಡಿಯಾ ಜಾಗತಿಕ ಮಟ್ಟದ ಒಂದು ಪ್ರಮುಖ ವೇದಿಕೆಯಾಗಿದೆ. ಪ್ರಪಂಚದ ದೊಡ್ಡ ದೊಡ್ಡ ಏರೋಸ್ಪೇಸ್ ಕಂಪನಿಗಳು, ರಕ್ಷಣಾ ಕಂಪನಿಗಳು, ತಾಂತ್ರಿಕ ತಜ್ಞರು, ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು, ಜಾಗತಿಕ ನೀತಿ ನಿರೂಪಕರು ಹಾಗೂ ರಕ್ಷಣಾ ಪಡೆಗಳ ಅಧಿಕಾರಿಗಳು ಒಂದೇ ಸೂರಿನಡಿ ಸೇರಲಿದ್ದಾರೆ. ಬೆಂಗಳೂರಿನಲ್ಲಿ ಮತ್ತೊಮ್ಮೆ ಈ ಅದ್ಧೂರಿ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳು ಶುರುವಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

