ಅಮ್ರುಲ್ಲಾಹ್ ಸಾಲೆಹ್ಗೆ ನಿಷ್ಠೆ ವ್ಯಕ್ತಪಡಿಸಿ ಪಂಜಶೀರ್ ಕಣಿವೆಯತ್ತ ಧಾವಿಸುತ್ತಿರುವ ಆಫ್ಘನ್ ಸೇನಾ ಪಡೆಗಳು!
ಈ ಬೆಳವಣಿಯಿಂದ ಪಂಜಶೀರ್ ನಾಯಕ ಅಹ್ಮದ್ ಮಸ್ಸೂದ್ ಅವರ ನೈತಿಕ ಸ್ಥೈರ್ಯ ಹೆಚ್ಚಿದೆ. ಸುಮಾರು 11,000 ಆಫ್ಘನ್ ಯೋಧರು ಪಂಜಶೀರ್ ಕಣಿವೆಯಲ್ಲಿ ಜಮಾವಣೆಗೊಂಡಿದ್ದಾರೆಂಬ ವರದಿ ಇದೆ.
ದಿನದಿಂದ ದಿನಕ್ಕೆ ಪಂಜಶೀರ್ ತಾಲಿಬಾನಿಗಳಿಗೆ ಕಬ್ಬಿಣದ ಕಡಲೆಯಾಗುತ್ತಿದೆ. ಆದರೆ ಈ ಪ್ರಾಂತ್ಯವನ್ನು ವಶಪಡಿಸಿಕೊಳ್ಳದೆ, ಸಮಗ್ರ ಅಫ್ಘಾನಿಸ್ತಾನದ ಮೇಲೆ ಪ್ರಭುತ್ವ ಸಾಧಿಸಿದಂತಾಗದು ಅನ್ನುವ ಅಂಶ ತಾಲಿಬಾನ್ ನಾಯಕತ್ವಕ್ಕೆ ಚೆನ್ನಾಗಿ ಗೊತ್ತಿದೆ. ಹಾಗೆಯೇ, ಪಂಜಶಿರ್ ಅನ್ನು ವಶಪಡಿಸಿಕೊಳ್ಳವುದು ಸುಲಭವಲ್ಲ ಅನ್ನೋದು ಸಹ ತಾಲಿಬಾನ್ ಗೊತ್ತು. ಪಂಜಶೀರ್ ಪ್ರಾಂತ್ಯದ ಪ್ರತಿರೋಧ ಈಗ ಮತ್ತಷ್ಟು ಹೆಚ್ಚಲಿದೆ. ಅಫ್ಫಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್ ಅವರು ಇದೇ ಪ್ರಾಂತ್ಯದವರಾಗಿದ್ದು ತಾಲಿಬಾನ್ ಕಾಬೂಲ್ ನಗರವನ್ನು ವಶಪಡಿಸಿಕೊಂಡ ನಂತರ ಅಲ್ಲಿಗೆ ಮರಳಿದ್ದಾರೆ.
ಒಂದು ಮುಖ್ಯ ಬೆಳವಣಿಗೆಯೆಂದರೆ, ಸಾಲೆಹ್ ಅವರಿಗೆ ನಿಷ್ಠೆ ಪ್ರದರ್ಶಿರುವ ಅಫ್ಘಾನಿಸ್ತಾನದ ಸೇನೆ ಪಂಜಶಿರ್ನಲ್ಲಿ ಜಮಾವಣೆಗೊಳ್ಳುತ್ತಿದೆ. ಇಲ್ಲಿರುವ ವಿಡಿಯೋನಲ್ಲಿ ನೀವು ಆಫ್ಘನ್ ಸೇನೆ ಪಂಜಶೀರ್ ಕಣಿವೆಯತ್ತ ಸಾಗುತ್ತಿರುವುದನ್ನು ಕಾಣಬಹುದು. ಈ ಬೆಳವಣಿಯಿಂದ ಪಂಜಶೀರ್ ನಾಯಕ ಅಹ್ಮದ್ ಮಸ್ಸೂದ್ ಅವರ ನೈತಿಕ ಸ್ಥೈರ್ಯ ಹೆಚ್ಚಿದೆ. ಸುಮಾರು 11,000 ಆಫ್ಘನ್ ಯೋಧರು ಪಂಜಶೀರ್ ಕಣಿವೆಯಲ್ಲಿ ಜಮಾವಣೆಗೊಂಡಿದ್ದಾರೆಂಬ ವರದಿ ಇದೆ.
ಅಹ್ಮದ್ ಅವರೊಂದಿಗೆ 9,000 ಹೋರಾಟಗಾರರ ಪಡೆಯಿದೆ. ಇದರಲ್ಲಿ ಸ್ಥಳೀಯ ಯೋಧರು, ಆಫ್ಘನ್ ಸೇನೆಯನ್ನು ತೊರೆದು ಬಂದವರು ಸೇರಿದ್ದಾರೆ. ಆಹ್ಮದ್ ಮತ್ತು ಸಾಲೆಹ್ ಅವರ ನೇತೃತ್ವದಲ್ಲಿ ಸೇನೆಗಳು ಹೇಗೆ ತಾಲಿಬಾನ್ ಸೇನೆಯನ್ನು ಹಿಮ್ಮೆಟ್ಟಿಸುತ್ತಾರೆ ಅಂತ ಕಾದು ನೋಡಬೇಕು.
ಇದನ್ನೂ ಓದಿ: ಬಾತುಕೋಳಿ ಸುರಕ್ಷಿತವಾಗಿ ರಸ್ತೆ ದಾಟಲು ಸಹಾಯ ಮಾಡಿ ಮಾನವೀಯತೆ ಮೆರೆದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್