6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?: ಇಲ್ಲಿದೆ ಮಾಹಿತಿ

Edited By:

Updated on: Aug 26, 2026 | 6:09 PM

ಮೈಸೂರು ದಸರಾ 2026ಕ್ಕೆ ದಿನಗಣನೆ ಆರಂಭವಾಗಿದೆ. ಸತತ ಆರು ಬಾರಿ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಆನೆ 60 ವರ್ಷ ತುಂಬಿದ ಕಾರಣ ನಿವೃತ್ತಿ ಹೊಂದಿದ್ದಾನೆ. ಆದರೆ, ಅವನ ದೀರ್ಘಾವಧಿಯ ಸೇವೆ, ಅನುಭವ ಮತ್ತು ಆನೆಗಳನ್ನು ನಿಯಂತ್ರಿಸುವ ಸಾಮರ್ಥ್ಯದ ಕಾರಣ, ದಸರಾದಲ್ಲಿ ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಮೈಸೂರು, ಆಗಸ್ಟ್​​ 27: ವಿಶ್ವ ವಿಖ್ಯಾತ ಮೈಸೂರು ದಸರಾ 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಂಪ್ರದಾಯಿಕ ಗಜಪಯಣ ಯಶಸ್ವಿಯಾಗಿ ಮುಗಿದಿದ್ದು, ಒಂಬತ್ತು ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿವೆ. ಈ ಬಾರಿಯ ದಸರಾದ ಪ್ರಮುಖ ಚರ್ಚಾ ವಿಷಯವೆಂದರೆ, ಸತತ ಆರು ಬಾರಿ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಅಭಿಮನ್ಯು ಆನೆ 60 ವರ್ಷ ತುಂಬಿದ ಕಾರಣ ನಿವೃತ್ತಿ ಹೊಂದಿದ್ದು, 2026ರ ದಸರಾದಲ್ಲಿ ಭಾಗವಹಿಸದಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಹೀಗಾಗಿ ಅರ್ಜುನ ಆನೆಗೆ ನೀಡಿದಂತೆ, ಅಭಿಮನ್ಯುವನ್ನು ಕೊನೆಯ ಬಾರಿಗೆ 2026ರ ಜಂಬೂ ಸವಾರಿಯಲ್ಲಿ ನಿಶಾನೆ ಆನೆಯಾಗಿ ಕರೆತರಬೇಕು ಎಂಬುದು ಹಲವರ ಬೇಡಿಕೆಯಾಗಿದೆ. ಅಭಿಮನ್ಯುವಿನ ಅನುಭವವು ಇತರ ಆನೆಗಳನ್ನು ನಿಯಂತ್ರಿಸುವಲ್ಲಿ ಮತ್ತು ಮೆರವಣಿಗೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿಸುತ್ತೆ. ಕಾಡಿನಲ್ಲಿ ಕಾರ್ಯಾಚರಣೆಗಳಲ್ಲಿ ಕೂಡ ಅಭಿಮನ್ಯು ಮಹತ್ವದ ಕೊಡುಗೆ ನೀಡಿದ್ದಾನೆ ಎಂಬುದು ಹಲವರ ಮಾತು. ಹೀಗಾಗಿ ಅರಣ್ಯ ಇಲಾಖೆ ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us