ಮನಸ್ಸಿನೊಳಗೆ ಮಡುಗಟ್ಟಿರುವ ಬೇಗುದಿಯನ್ನು ಲೋಕಸಭಾ ಚುನಾವಣೆ ಬಳಿಕ ಹೊರಹಾಕುವೆ: ಸಿಟಿ ರವಿ

|

Updated on: Mar 08, 2024 | 10:29 AM

ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಪ್ರಧಾನ ಮಂತ್ರಿ ಮೋದಿಯವರ ಕೈ ಬಲಪಡಿಸುವುದರ ಮೇಲೆಯೇ ಗಮನ ಕೇಂದ್ರೀಕೃತಗೊಂಡಿರುವುದರಿಂದ ಸದ್ಯಕ್ಕೆ ಏನನ್ನೂ ಹೇಳಲ್ಲ, ಚುನಾವಣೆಯ ಬಳಿಕ ಎಲ್ಲವನ್ನು ಬಹಿರಂಗಪಡಿಸುವುದಾಗಿ ರವಿ ಹೇಳಿದರು.

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ (Assembly polls) ಮತ್ತು ನಂತರ ಪಕ್ಷದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಹಿರಿಯ ನಾಯಕ ಸಿಟಿ ರವಿ (CT Ravi) ಅಸಮಾಧಾನಗೊಂಡಿದ್ದಾರೆ ಅಂತ ಕನ್ನಡಿಗರಿಗೆಲ್ಲ ಗೊತ್ತು. ಅದನ್ನವರು ಬಹಿರಂಗಗೊಳಿಸದೆ ಹಿರಿತನ ಮೆರೆದಿದ್ದರು. ಆದರೆ, ಬೇಗುದಿಯನ್ನು ಬಹಳ ದಿನ ಮನಸ್ಸಿನೊಳಗೆ ಇಟ್ಟುಕೊಳ್ಳಲಾಗಲ್ಲ, ತನ್ನೆಲ್ಲ ಬೇಸರ ಮತ್ತು ಆಸಮಾಧಾನವನ್ನು ಲೋಕಸಭಾ ಚುನಾವಣೆಯ (Lok Sabha polls) ಬಳಿಕ ಹೊರಹಾಕುವುದಾಗಿ ಅವರು ಇಂದು ಚಿಕ್ಕಮಗಳೂರುನಲ್ಲಿ ಹೇಳಿದರು. ಮನಸ್ಸಿನಲ್ಲಿ ಬೇಜಾರು ಮಡುಗಟ್ಟಿದೆ, ಅದನ್ನು ಬಹಳ ದಿನ ಹೊಟ್ಟೆಯೊಳಗೆ ಇಟ್ಟುಕೊಳ್ಳಲಾಗಲ್ಲ, ಅದನ್ನು ಜನರ ಮುಂದೆ ಹೊರಹಾಕಲೇಬೇಕು, ಲೋಕಸಭಾ ಚುನಾವಣೆ ಮುಗಿಯಲಿ ಅಂತ ಕಾಯ್ತಾ ಇದ್ದೇನೆ, ನಮ್ಮೆಲ್ಲರ ಗುರಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಮಾಡುವುದರ ಮೇಲೆ ನೆಟ್ಟಿದೆ ಎಂದು ರವಿ ಹೇಳಿದರು. ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಪ್ರಧಾನ ಮಂತ್ರಿ ಮೋದಿಯವರ ಕೈ ಬಲಪಡಿಸುವುದರ ಮೇಲೆಯೇ ಗಮನ ಕೇಂದ್ರೀಕೃತಗೊಂಡಿರುವುದರಿಂದ ಸದ್ಯಕ್ಕೆ ಏನನ್ನೂ ಹೇಳಲ್ಲ, ಚುನಾವಣೆಯ ಬಳಿಕ ಎಲ್ಲವನ್ನು ಬಹಿರಂಗಪಡಿಸುವುದಾಗಿ ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕುಂಕುಮ ಬೇಡ ಎನ್ನುವ ಇವರು ಹಿಂದೂನಾ? ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಸಿಟಿ ರವಿ ಕಿಡಿ

Follow us on