ಲಖನೌ ಯುವತಿಯ ನಂತರ ಈಗ ಪುಣೆ ಯುವತಿಯ ಸರದಿ, ಆದರೆ ಈಕೆ ಮಾಡಿದ್ದು ಬೇರೆ, ನೀವೇ ನೋಡಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 05, 2021 | 5:14 PM

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈ ಘಟನೆ ಬುಧವಾರ ರಾತ್ರಿ ಸುಮಾರು 10.30 ರ ಹೊತ್ತಿಗೆ ನಡೆದಿದೆ. ನಡುರಸ್ತೆಯಲ್ಲಿ ಆಕೆ ಬಿದ್ದು ಹೊರಳಾಡಿದ್ದರಿಂದ ಸ್ವಲ್ಪ ಹೊತ್ತು ಟ್ರಾಫಿಕ್ ಮೂವ್ಮೆಂಟ್ನಲ್ಲೂ ವ್ಯತ್ಯಯ ಉಂಟಾಗಿದೆ.

ಯುವತಿಯರು ಯಾಕೆ ಹಿಂಗಾಡ್ತಿದ್ದಾರೆ ಅಂತ ಭಗವಂತನೇ ಬಲ್ಲ. ಒಬ್ಬಳು ಲಖನೌ ನಗರದಲ್ಲಿ ಕ್ಯಾಬಿಯೊಬ್ಬನನ್ನು ವಿನಾಕಾರಣ ಮನಬಂದಂತೆ ಥಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಉಗಿಸಿಕೊಳ್ಳುತ್ತಾಳೆ. ಇಲ್ಲೊಬ್ಬಳು ಕುಡಿದ ಅಮಲಿನಲ್ಲಿ ನಡುರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದಾಳೆ. ಅಂದಹಾಗೆ, ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ಪುಣೆ ನಗರದಲ್ಲಿ. ಚೆನ್ನಾಗಿ ಓದಿಕೊಂಡಂತೆ ಕಾಣುವ ಮತ್ತು ಉತ್ತಮ ಮನೆತನದ ಹಿನ್ನೆಲೆಯಿಂದ ಬಂದಂತಿರುವ ಈಕೆಯ ಐಡೆಂಟಿಟಿಯನ್ನು ಪುಣೆ ಪೊಲೀಸರು ಬಹಿರಂಗಪಡಿಸಿಲ್ಲ,

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈ ಘಟನೆ ಬುಧವಾರ ರಾತ್ರಿ ಸುಮಾರು 10.30 ರ ಹೊತ್ತಿಗೆ ನಡೆದಿದೆ. ನಡುರಸ್ತೆಯಲ್ಲಿ ಆಕೆ ಬಿದ್ದು ಹೊರಳಾಡಿದ್ದರಿಂದ ಸ್ವಲ್ಪ ಹೊತ್ತು ಟ್ರಾಫಿಕ್ ಮೂವ್ಮೆಂಟ್ನಲ್ಲೂ ವ್ಯತ್ಯಯ ಉಂಟಾಗಿದೆ. ರಸ್ತೆ ಮೇಲೆ ಆಕೆ ಒಮ್ಮೆ ಮಲಗುತ್ತಾಳೆ, ಸ್ವಲ್ಪ ಹೊತ್ತಿನ ನಂತರ ಎದ್ದು ಕೂರುತ್ತಾಳೆ. ಆಕೆಯ ರಸ್ತೆ ಮೇಲೆ ಕೂತಿರುವುನ್ನು ನೋಡಿ ಬ್ರೇಕ್ ಒತ್ತಿ ತನ್ನ ಕಾರನ್ನು ನಿಲ್ಲಿಸುವ ಚಾಲಕನಿಗೆ ಆಕೆ, ‘ಯಾಕೆ ನಿಲ್ಲಿಸಿದೆ, ನನ್ನ ಮೇಲಿಂದ ಡ್ರೈವ್ ಮಾಡ್ಕೊಂಡು ಹೋಗು,’ ಅಂತ ಅರಚುತ್ತಿರುವುದು ವಿಡಿಯೋನಲ್ಲಿ ಕಾಣಿಸುತ್ತಿದೆ. ಕೆಲವರು ‘ಯಾಕಮ್ಮಾ ರಸ್ತೇಲಿ ಕೂತಿದ್ದೀಯಾ, ಮನೆಗೆ ಹೋಗು,’ ಅಂತ ಹೇಳಿದಾಗ ಅವರನ್ನು ಗದರಿದ್ದಾಳೆ.

ಸಮೀಕ್ಷೆಯೊಂದರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಯುವತಿಯಲ್ಲೂ ಕುಡಿತ ಮತ್ತು ಡ್ರಗ್ಸ್ ಸೇವನೆಯ ಪ್ರಮಾಣ ಹೆಚ್ಚುತ್ತಿದೆ. ಅವರು ಪುರುಷರಿಗೆ ಸರಿಸಮಾನರಾಗಿ ಕೆಲಸ ಮಡುತ್ತಾರೆ, ಅವರಷ್ಟು ಅಥವಾ ಅವರಿಗಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ, ಬದುಕಿನ ಎಲ್ಲ ಸಂತೋಷಗಳನ್ನು ಪಡೆಯಲು ಬಯಸುತ್ತಾರೆ-ಎಲ್ಲ ಸರಿ. ತಮಗೆ ಸರಿಯೆನಿಸುವಂಥ ರೀತಿಯಲ್ಲಿ ಬದುಕುವ ಸ್ವಾತಂತ್ರ್ಯ ಮತ್ತು ಹಕ್ಕು ಅವರಿಗಿದೆ.

ಆದರೆ, ಅದು ಎಲ್ಲೆ ಮೀರಿದರೆ ಇಂಥ ಘಟನೆಗಳು ನಡೆಯುತ್ತವೆ ಮತ್ತು ಅನಾಹುತಗಳು ಜರುಗುತ್ತವೆ.

ಇದನ್ನೂ ಓದಿ: Lucknow Girl Video: ಪೊಲೀಸ್ ಎದುರಲ್ಲೇ ಟ್ರಾಫಿಕ್​ ಮಧ್ಯೆ ಕ್ಯಾಬ್​ ಚಾಲಕನಿಗೆ ಥಳಿಸಿದ ಯುವತಿ; ಶಾಕಿಂಗ್ ವಿಡಿಯೋ ವೈರಲ್