ಸಿಎಂ ಕುರ್ಚಿ ಕಿತ್ತಾಟ: ಬೆಂಗಳೂರಿಗೆ ದೌಡಾಯಿಸಿದ ಖರ್ಗೆ, ನವೆಂಬರ್ ಕ್ರಾಂತಿನಾ ಶಾಂತಿನಾ?
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿ ಕಾಳಗ ಜೋರಾಗಿದೆ.ಇಷ್ಟು ದಿನಗಳ ಕಾಲ ಎಲ್ಲವೂ ತಣ್ಣಗಿದ್ದಂತೆ ಕಾಣ್ತಿತ್ತು. ಅದ್ಯಾವಾಗ ಸರ್ಕಾರ ಎರಡುವರೆ ಪೂರೈಸಿತೋ, ನಾಯಕರ ಒಂದೊಂದೇ ಗೇಮ್ ಪ್ಲ್ಯಾನ್ಗಳು ಶುರುವಾಗಿವೆ. ಸುಮ್ಮನಿರಿ ಸುಮ್ಮನಿರಿ ಅಂತಿದ್ದ ಡಿಕೆ ಶಿವಕುಮಾರ್, ಈಗ ಸೂಚನೆ ಕೊಡುವುದನ್ನು ನಿಲ್ಲಿಸಿದಂತೆ ಕಾಣಿಸುತ್ತಿದೆ. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ ಕೂಡ ನಾನೇ ಸಿಎಂ, ನಾನೇ ಸಿಎಂ ಎನ್ನುವ ಮೂಲಕ ಹೊಸ ಆಟ ಶುರು ಮಾಡಿದ್ದಾರೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಬೆಂಗಳೂರಿಗೆ ದೌಡಾಯಿಸಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮ್ಯಯ ಪ್ರತ್ಯೇಕವಾಗಿ ಖರ್ಗೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೋ ಎನ್ನುವ ಕುತೂಹಲ ಮೂಡಿಸಿದೆ.
ಬೆಂಗಳೂರು, (ನವೆಂಬರ್ 21): ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿ ಕಾಳಗ ಜೋರಾಗಿದೆ.ಇಷ್ಟು ದಿನಗಳ ಕಾಲ ಎಲ್ಲವೂ ತಣ್ಣಗಿದ್ದಂತೆ ಕಾಣ್ತಿತ್ತು. ಅದ್ಯಾವಾಗ ಸರ್ಕಾರ ಎರಡುವರೆ ಪೂರೈಸಿತೋ, ನಾಯಕರ ಒಂದೊಂದೇ ಗೇಮ್ ಪ್ಲ್ಯಾನ್ಗಳು ಶುರುವಾಗಿವೆ. ಸುಮ್ಮನಿರಿ ಸುಮ್ಮನಿರಿ ಅಂತಿದ್ದ ಡಿಕೆ ಶಿವಕುಮಾರ್, ಈಗ ಸೂಚನೆ ಕೊಡುವುದನ್ನು ನಿಲ್ಲಿಸಿದಂತೆ ಕಾಣಿಸುತ್ತಿದೆ. ಇದರ ಜೊತೆಗೆ ಸಿಎಂ ಸಿದ್ದರಾಮಯ್ಯ ಕೂಡ ನಾನೇ ಸಿಎಂ, ನಾನೇ ಸಿಎಂ ಎನ್ನುವ ಮೂಲಕ ಹೊಸ ಆಟ ಶುರು ಮಾಡಿದ್ದಾರೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ದೌಡಾಯಿಸಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮ್ಯಯ ಪ್ರತ್ಯೇಕವಾಗಿ ಖರ್ಗೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೋ ಎನ್ನುವ ಕುತೂಹಲ ಮೂಡಿಸಿದೆ.
