ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಗಾಂಧಿ ಪುತ್ಥಳಿಯನ್ನು ನೂತನ ಶೈಲಿಯಲ್ಲಿ ಅನಾವರಣಗೊಳಿಸಿದ ಮಲ್ಲಿಕಾರ್ಜುನ ಖರ್ಗೆ
ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಕೆತ್ತಿದ ಖ್ಯಾತ ಮತ್ತು ಪ್ರಶಸ್ತಿ ವಿಜೇತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರೇ ಇಲ್ಲಿನ ಗಾಂಧಿ ಪುತ್ಥಳಿಯನ್ನೂ ಕೆತ್ತಿದ್ದಾರೆ. ಪುತ್ಥಳಿಯು 25 ಅಡಿ ಎತ್ತರವಿದೆ ಮತ್ತು ನೆಲದಿಂದ ಸುಮಾರು 37 ಅಡಿ ಎತ್ತರದಲ್ಲಿದೆ ಎಂದು ಕಾರ್ಯಕ್ರಮದ ನಿರೂಪಕಿ ಹೇಳುತ್ತಾರೆ. ಅವರು ಹೇಳುವ ಪ್ರಕಾರ ಪ್ರತಿಮೆಗೆ 20 ಟನ್ ಕಂಚನ್ನು ಬಳಸಲಾಗಿದೆ
ಬೆಳಗಾವಿ: ನಗರದಲ್ಲಿ ಕಾಂಗ್ರೆಸ್ ಅಧಿವೇಶನ ಆಚರಣೆ ಶತಮಾನೋತ್ಸವ ಆಚರಣೆ ಸಮಾರಂಭ ಅದ್ದೂರಿಯಾಗಿ ನಡೆಯುತ್ತಿದೆ. ಈಗ್ಗೆ ಸ್ವಲ್ಪ ಸಮಯದ ಮುಂಚೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುವರ್ಣ ಸೌಧದ ಆವರಣದಲ್ಲಿ ನಿರ್ಮಿಸಲಾಗಿರುವ ಮಹಾತ್ಮಾ ಗಾಂಧಿ ಪುತ್ಥಳಿಯನ್ನು ಅನಾವರಣಗೊಳಿಸಿದರು. ಪ್ರತಿಮೆಯನ್ನು ಗಾಂಧಿಯವರು ಬಳಸುತ್ತಿದ್ದ ಚರಕದ ಮಾದರಿಯ ಮೂಲಕ ಅನಾವರಣಗೊಳಿಸಿದ್ದು ವಿಶೇಷ. ಈ ಸಂದರ್ಭದಲ್ಲಿ ಖರ್ಗೆಯವರೊದಿಗೆ ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ, ಅಸೆಂಬ್ಲಿ ಸ್ಪೀಕರ್ ಯುಟಿ ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾನೂನು ಸಚಿವ ಹೆಚ್ ಕೆ ಪಾಟೀಲ್ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಹಾಜರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ; ಸಿದ್ದರಾಮಯ್ಯ ಏರ್ಪಡಿಸಿರುವ ಲಂಚ್ ನಂತರ ಕಾರ್ಯಕ್ರಮ ಶುರುವಾಗಲಿದೆ: ಡಿಕೆ ಶಿವಕುಮಾರ್
Published on: Jan 21, 2025 01:32 PM