‘ಲಕ್ಷ್ಣಣ ರೇಖೆ’ ದಾಟದಂತೆ ಜಮೀರ್ ಅಹ್ಮದ್ ಗೆ ಎಐಸಿಸಿ ಖಡಕ್ ಎಚ್ಚರಿಕೆ!
ರಂದೀಪ್ ಸುರ್ಜೆವಾಲಾ ಅವರು ಜಮೀರ್ ಗೆ ಪತ್ರವೊಂದನ್ನು ಬರೆದು ಅವರ ಸಾರ್ವಜನಿಕ ಹೇಳಿಕೆಗಳಿಂದ ಪಕ್ಷಕ್ಕೆ ತೀವ್ರ ಸ್ವರೂಪದ ಮುಜುಗುರ ಮತ್ತು ಅದರ ಇಮೇಜಿಗೆ ಧಕ್ಕೆಯುಂಟಾಗಿದೆ, ಹಾಗಾಗಿ ಮಾತಾಡುವಾಗ ನಾಲಿಗೆ ಮೇಲೆ ಎಚ್ಚರವಿರಲಿ ಎಂದು ಹೇಳಿದ್ದಾರೆ.
ಬೆಂಗಳೂರು: ಇತ್ತೀಚಿಗೆ ಸಾರ್ವಜನಿಕವಾಗಿ ಮನಸ್ಸಿಗೆ ಬಂದಂತೆಲ್ಲ ಮಾತಾಡಲಾರಂಭಿಸಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಗೆ (Zameer Ahmed) ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಖಡಕ್ ಎಚ್ಚರಿಗೆ ನೀಡಿ ಪಕ್ಷದ ‘ಲಕ್ಷ್ಮಣ ರೇಖೆ’ (Lakshman Rekha) ದಾಟಕೂಡದು ಅಂತ ಗದರಿದೆ. ಎಐಸಿಸಿಯ ಕರ್ನಾಟಕ ಉಸ್ತುವಾರಿಯಾಗಿರುವ ರಂದೀಪ್ ಸುರ್ಜೆವಾಲಾ ಅವರು ಜಮೀರ್ ಗೆ ಪತ್ರವೊಂದನ್ನು ಬರೆದು ಅವರ ಸಾರ್ವಜನಿಕ ಹೇಳಿಕೆಗಳಿಂದ ಪಕ್ಷಕ್ಕೆ ತೀವ್ರ ಸ್ವರೂಪದ ಮುಜುಗುರ ಮತ್ತು ಅದರ ಇಮೇಜಿಗೆ ಧಕ್ಕೆಯುಂಟಾಗಿದೆ, ಹಾಗಾಗಿ ಮಾತಾಡುವಾಗ ನಾಲಿಗೆ ಮೇಲೆ ಎಚ್ಚರವಿರಲಿ ಎಂದು ಹೇಳಿದ್ದಾರೆ.
Latest Videos