ಮಂಗಳೂರಿನ ಪಬ್​ನಲ್ಲಿ ಕಾಲೇಜು ಯುವಕ-ಯುವತಿಯರ ಮೋಜು-ಮಸ್ತಿ; ಬಜರಂಗದಳ ಕಾರ್ಯಕರ್ತರಿಂದ ದಾಳಿ

ಮಂಗಳೂರಿನ ಪಬ್​ನಲ್ಲಿ ಕಾಲೇಜು ಯುವಕ-ಯುವತಿಯರ ಮೋಜು-ಮಸ್ತಿ; ಬಜರಂಗದಳ ಕಾರ್ಯಕರ್ತರಿಂದ ದಾಳಿ

TV9 Web
| Updated By: Rakesh Nayak Manchi

Updated on:Jul 26, 2022 | 9:20 AM

ಮಂಗಳೂರಿನ ರಿಸೈಕಲ್-ದಿ ಲಾಂಜ್ ಪಬ್​ನಲ್ಲಿ ಕಾಲೇಜು ವಿದ್ಯಾರ್ಥಿಗಳು ಮೋಜುಮಸ್ತಿಯಲ್ಲಿ ತೊಡಗಿದ್ದಾಗ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ಪಾರ್ಟಿಯನ್ನು ನಿಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಗುಂಪು ಚದುರಿಸಿದ್ದಾರೆ.

ಮಂಗಳೂರು: ಇಲ್ಲಿನ ರಿಸೈಕಲ್-ದಿ ಲಾಂಜ್ ಪಬ್​ನಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಅಡ್ಡಿಪಡಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಮದ್ಯ ಸೇವನೆ ಮಾಡಿ ಕುಣಿಯುತ್ತಿದ್ದ ಕಾಲೇಜಿನ ಯುವಕ-ಯುವತಿಯರನ್ನು ಪ್ರಶ್ನಿಸಿದ ಕಾರ್ಯಕರ್ತರು, ಪಾರ್ಟಿಯನ್ನು ನಿಲ್ಲಿಸಿದ್ದಾರೆ. ಅಲ್ಲದೆ ಅಶ್ಲೀಲವಾಗಿ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಜರಂಗದಳ ಕಾರ್ಯಕರ್ತರನ್ನು ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಯುವಕ-ಯುವತಿಯರು ಪಬ್​ನಿಂದ ಹೊರಟು ಹೋಗಿದ್ದಾರೆ. (2009ರಲ್ಲಿ ಈ ಪಬ್​ನಲ್ಲಿ ಏನಾಗಿತ್ತು?)

Published on: Jul 26, 2022 09:20 AM