Loading video

ಹೈಕಮಾಂಡ್​ಗೆ ಕಳಿಸಿದ ಪಟ್ಟಿಯಲ್ಲಿ ಅಜ್ಜಂಪೀರ್ ಖಾದ್ರಿ ಹೆಸರು ಮೊದಲ ಸ್ಥಾನದಲ್ಲಿತ್ತು: ಸಿದ್ದರಾಮಯ್ಯ

Updated on: Nov 04, 2024 | 7:38 PM

ಸಿದ್ದರಾಮಯ್ಯ ಭಾಷಣ ಅರಂಭಿಸಿದಾಗ ಜನರ ಗುಂಪೊಂದು ಇದ್ದಕ್ಕಿದ್ದಂತೆ ಗಲಾಟೆ ಮಾಡಲು ಪ್ರಾರಂಭಿಸಿತು. ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲಿ ಏಯ್ ಸುಮ್ನೆ ಕೂತ್ಕೊಳ್ರಯ್ಯ ಅಂತ ಹೇಳಿ ತಮ್ಮ ಭಾಷಣ ಮುಂದುವರಿಸಿದರು. ಶಿಗ್ಗಾವಿಯಲ್ಲ್ಲಿ ಅವರು ಮತಬೇಟೆ ನಡೆಸಿದರೆ, ಬಿಜೆಪಿ ನಾಯಕ ಪ್ರತಾಪ್ ಸಿಂಹ ರೈತರ ಪರ ಪ್ರತಿಭಟನೆ ನಡೆಸಿದರು.

ಹಾವೇರಿ: ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಪರ ಪ್ರಚಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲ್ಲಿನ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್​ಗೆ ಕಳಿಸಿದಾಗ ಅದರಲ್ಲಿ ಮೊದಲ ಹೆಸರು ಅಜ್ಜಂಪೀರ್ ಖಾದ್ರಿ ಮತ್ತು ಎರಡನೇ ಹೆಸರು ಪಠಾಣ್ ಅವರದಾಗಿತ್ತು. ಇವರಿಬ್ಬರ ಜೊತೆ ಬೇರೆ ಆಕಾಂಕ್ಷಿಗಳ ಹೆಸರು ಸಹ ಇತ್ತಾದರೂ ವರಿಷ್ಠರು ಪಠಾಣ್​ಗೆ ಟಿಕೆಟ್ ನೀಡಿದ್ದಾರೆಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿಗ್ಗಾಂವಿ: ಸಿಎಂ ಸಿದ್ದರಾಮಯ್ಯ ಕುಳಿತಿದ್ದಾಗ ಕಿತ್ತುಬಂದ ಪೆಂಡಾಲ್, ಆಮೇಲೇನಾಯ್ತು ನೋಡಿ

Published on: Nov 04, 2024 05:13 PM