ಗ್ಯಾಸ್​ ಇಲ್ಲದೇ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು: ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ

Edited By:

Updated on: Apr 04, 2026 | 6:49 AM

ಇಸ್ರೆಲ್ ಅಮೆರಿಕಾ-ಇರಾನ್ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಅಭಾಯ ಸೃಷ್ಟಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ (LPG) ಸಮಸ್ಯೆ ಉದ್ಭವಿಸಿದೆ. ಆಟೋ ದುಡಿಮೆಯನ್ನು ನಂಬಿ ಜೀವನ ಮಾಡುತ್ತಿರುವಾಗ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಆಟೋವನ್ನು ನಿಲ್ಲಿಸುವ ಸ್ಥಿತಿ ಬಂದಿದ್ದು, ಸಂಸಾರದ ಬಂಡಿ ಸಾಗಿಸಲು ಸಾರಥಿಗಳು ಒದ್ದಾಡುತ್ತಿದ್ದಾರೆ.

ಬೆಂಗಳೂರು, (ಏಪ್ರಿಲ್ 03): ಇಸ್ರೆಲ್ ಅಮೆರಿಕಾ-ಇರಾನ್ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಅಭಾವ ಸೃಷ್ಟಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ (LPG) ಸಮಸ್ಯೆ ಉದ್ಭವಿಸಿದೆ. ಆಟೋ ದುಡಿಮೆಯನ್ನು ನಂಬಿ ಜೀವನ ಮಾಡುತ್ತಿರುವಾಗ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಆಟೋವನ್ನು ನಿಲ್ಲಿಸುವ ಸ್ಥಿತಿ ಬಂದಿದ್ದು, ಸಂಸಾರದ ಬಂಡಿ ಸಾಗಿಸಲು ಸಾರಥಿಗಳು ಒದ್ದಾಡುತ್ತಿದ್ದಾರೆ. ಯಾಕಂದ್ರೆ, ಹಗಲು-ರಾತ್ರಿ ಗ್ಯಾಸ್‌ಗಳ ಮುಂದೆ ಕ್ಯೂ ನಿಲ್ಲೋದೇ ಆಯ್ತು. ಗ್ಯಾಸ್ ತುಂಬಿ ಆಟೋ (Auto) ಓಡಿಸೋದೆ ಆಮೇಲಿನ ಮಾತು. ಯಾವ ಬಂಕ್ ಮುಂದೆ ನೋಡಿದ್ರೂ ಕಿಲೋಮೀಟರ್‌ಗಟ್ಟಲೇ ಹನುಮನ ಬಾಲದಂತೆ ಆಟೋಗಳ ಸಾಲು ಸಾಮಾನ್ಯವಾಗಿ ಬಿಟ್ಟಿದೆ. ಯಾವ ಬಂಕ್ ನೋಡಿದ್ರೂ ಕನಿಷ್ಠ 100 ರಿಂದ 200 ಆಟೋಗಳು ಇದ್ದೇ ಇರ್ತವೆ. ಮನೆ ಮಕ್ಕಳು ಬೀದಿಯಲ್ಲಿ ನಿಲ್ಲೋ ಸ್ಥಿತಿ ಬಂದೊದಗಿದೆ.

Published on: Apr 03, 2026 10:18 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More