Mysuru Dasara Mahotsav-2024: ಮೈಸೂರು ದಸರಾ….ಹಾಡು ಕೇಳುತ್ತಾ ಜಂಬೂ ಸವಾರಿ ನೋಡ್ತಿದ್ರೆ ನೋಸ್ಟಾಲ್ಜಿಕ್ ಅನುಭವ!

Updated on: Oct 12, 2024 | 7:41 PM

Mysuru Dasara Mahotsav-2024: ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಸಿದ್ದರಾಮಯ್ಯ ಸರ್ಕಾರ ಅತ್ಯಂತ ವಿಜೃಂಭಣೆ ಮತ್ತು ಅದ್ದೂರಿಯಾಗಿ ನೆರವೇರಿಸಿದೆ ಎಂದರೆ ಉತ್ಪ್ರೇಕ್ಷೆ ಅನಿಸದು. ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟಕ್ಕೆ ದಸರಾ ಉತ್ಸವದ ಯಶಸ್ವೀ ಆಚರಣೆ ಕೊಂಚ ನಿರಾಳತೆ ಒದಗಿಸಿರಬಹುದು.

ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರ……..ಪಿಬಿ ಶ್ರೀನಿವಾಸ್ ಹಾಡಿರುವ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕರುಳಿನ ಕರೆ ಚಿತ್ರದ ಹಾಡು 50 ವರ್ಷಗಳಿಗಿಂತ ಹೆಚ್ಚು ಹಳೆಯದಾದರೂ ದಸರಾ ಸಮಯದಲ್ಲಿ ಇವತ್ತಿಗೂ ಪ್ರಸ್ತುತ. ಈ ದೃಶ್ಯಗಳನ್ನು ನೋಡುತ್ತಾ ಹಾಡನ್ನು ನೆನಪಿಸಿಕೊಂಡರೆ ನೋಸ್ಟಾಲ್ಜಿಕ್ ಅನುಭವ! ಝಗಮಗಿಸುವ ದೀಪಾಲಂಕಾರಗಳ ಮೈಸೂರು ರಸ್ತೆಗಳಲ್ಲಿ ನಡೆಯುವ ಜಂಬೂ ಸವಾರಿಯನ್ನು ಬದುಕಿನಲ್ಲಿ ಒಮ್ಮೆಯಾದರೂ ನೋಡಬೇಕು ಅನಿಸದಿರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Mysuru Dasara: ಮೈಸೂರು ದಸರಾ ಜಂಬೂಸವಾರಿ: ಅದ್ಭುತ ಕ್ಷಣ ಕಣ್ತುಂಬಿಕೊಂಡ ಕೋಟ್ಯಂತರ ಜನರು

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More