ನನ್ನೊಂದಿಗೆ ಕಾಂಗ್ರೆಸ್ ಸೇರಿದ್ದವರೆಲ್ಲ ವಾಪಸ್ಸು ಬಿಜೆಪಿಗೆ ಬರುತ್ತಿದ್ದಾರೆ: ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ
ಅವರು ಮಾತ್ರವಲ್ಲದೆ, ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಹ ಬಿಜೆಪಿಗೆ ಬರೋದಾಗಿ ಹೇಳುತ್ತಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ, ತಮ್ಮ ತಮ್ಮ ಜಿಲ್ಲೆಯ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಅಲ್ಲೇ ಪಕ್ಷಕ್ಕೆ ಸೇರುವಂತೆ ಮತ್ತು ಅದಕ್ಕಾಗಿ ಹುಬ್ಬಳ್ಳಿಗೆ ಬರುವ ಅವಶ್ಯಕತೆ ಇಲ್ಲವೆಂದು ಸೂಚಿಸಿರುವುದಾಗಿ ಹೇಳಿದರು.
ಹುಬ್ಬಳ್ಳಿ: ಕೆಲ ದಿನಗಳ ಹಿಂದೆ ಜಗದೀಶ್ ಶೆಟ್ಟರ್ (Jagadish Shettar) ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಕುಳಿತು ಪತ್ರಕರ್ತರನ್ನು ಅಲ್ಲಿಗೆ ಕರೆಸಿ ಬಿಜೆಪಿ ನಾಯಕರನ್ನು (BJP leaders) ಹಿಗ್ಗಾಮುಗ್ಗಾ ತೆಗಳುತ್ತಿದ್ದರು. ಈಗ ಅವರು ತಮ್ಮ ಗೂಡಿಗೆ ವಾಪಸ್ಸಾಗಿರುವುದರಿಂದ ಅದೇ ಸ್ಥಳದಲ್ಲಿ ಕೂತು ಕಾಂಗ್ರೆಸ್ ಪಕ್ಷವನ್ನು (Congress party) ಟೀಕಿಸುತ್ತಿದ್ದಾರೆ! ಶೆಟ್ಟರ್ ಅವರ ಯಾವ ಮಾತುಗಳನ್ನು ನಂಬಬೇಕು ಅಂತ ಮಾಧ್ಯಮ ಪ್ರತಿನಿಧಿಗಳಿಗೆ ನಿಸ್ಸಂದೇಹವಾಗಿ ಗೊಂದಲವುಂಟಾಗಿರುತ್ತದೆ. ಬಿಡಿ, ಅದು ಬೇರೆ ವಿಚಾರ. ಇವತ್ತು ಮಾತಾಡುವಾಗ ಶೆಟ್ಟರ್, ತಮ್ಮೊಂದಿಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದವರೆಲ್ಲ ವಾಪಸ್ಸು ಬರುತ್ತಿದ್ದಾರೆ ಎಂದು ಹೇಳಿದರು. ಅವರು ಮಾತ್ರವಲ್ಲದೆ, ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಹ ಬಿಜೆಪಿಗೆ ಬರೋದಾಗಿ ಹೇಳುತ್ತಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ, ತಮ್ಮ ತಮ್ಮ ಜಿಲ್ಲೆಯ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಅಲ್ಲೇ ಪಕ್ಷಕ್ಕೆ ಸೇರುವಂತೆ ಮತ್ತು ಅದಕ್ಕಾಗಿ ಹುಬ್ಬಳ್ಳಿಗೆ ಬರುವ ಅವಶ್ಯಕತೆ ಇಲ್ಲವೆಂದು ಸೂಚಿಸಿರುವುದಾಗಿ ಹೇಳಿದರು. ನೀವು ಕಾಂಗ್ರೆಸ್ ಸೇರಿದ ಕಾರಣಕ್ಕೆ ನಾವೂ ಸಹ ಸೇರಿದ್ದೆವು, ನೀವೇ ವಾಪಸ್ಸು ಹೋದ ಮೇಲೆ ಅಲ್ಲಿ ನಮ್ಮದೇನು ಕೆಲಸ ಅಂತ ಬಹಳಷ್ಟು ಜನ ಹೇಳುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ