ಪುನೀತ್ ಮನೆಯಲ್ಲಿ ಅಪ್ಪು ಫೋಟೋ ಮುಂದೆ ಅಲ್ಲು ಅರ್ಜುನ್ ಭಾವುಕ ಕ್ಷಣ; ವಿಡಿಯೋ ನೋಡಿ
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ಫೋಟೋ ಎದುರಿನಲ್ಲಿ ಒಂದಷ್ಟು ಕ್ಷಣಗಳ ಕಾಲ ನಿಂತು ಕೈಮುಗಿದ ಅಲ್ಲು ಅರ್ಜುನ್ ಅವರು ಭಾವುಕರಾದರು. ನಂತರ ಸಮಾಧಿಗೆ ನಮಿಸಿದರು.
ನಟ ಅಲ್ಲು ಅರ್ಜುನ್ (Allu Arjun) ಮತ್ತು ಪುನೀತ್ ರಾಜ್ಕುಮಾರ್ ಅವರ ನಡುವೆ ಸ್ನೇಹವಿತ್ತು. ಹೃದಯಾಘಾತದಿಂದ ಪುನೀತ್ ನಿಧನರಾಗಿದ್ದು ಇಡೀ ಚಿತ್ರರಂಗಕ್ಕೆ ನೋವು ತಂದ ಸಂಗತಿ. ಅಪ್ಪು ಮನೆಗೆ ಅನೇಕ ಸೆಲೆಬ್ರಿಟಿಗಳು ಬಂದು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇಂದು (ಫೆ.3) ಟಾಲಿವುಡ್ ನಟ ಅಲ್ಲು ಅರ್ಜುನ್ ಕೂಡ ಬೆಂಗಳೂರಿಗೆ ಆಗಮಿಸಿ ಪುನೀತ್ ರಾಜ್ಕುಮಾರ್ (Puneeth Rajkumar) ಸಮಾಧಿಗೆ ನಮಿಸಿದ್ದಾರೆ. ಅದಕ್ಕೂ ಮುನ್ನ ಅವರು ಪುನೀತ್ ನಿವಾಸಕ್ಕೆ ತೆರಳಿ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ‘ಪವರ್ ಸ್ಟಾರ್’ ಫೋಟೋ (Puneeth Rajkumar Photo) ಎದುರಿನಲ್ಲಿ ಒಂದಷ್ಟು ಕ್ಷಣಗಳ ಕಾಲ ನಿಂತು ಕೈಮುಗಿದ ಅಲ್ಲು ಅರ್ಜುನ್ ಅವರು ಭಾವುಕರಾದರು. ನಂತರ ಸಮಾಧಿ ಬಳಿಯಲ್ಲಿ ಮಾತನಾಡಿದ ಅವರು ಅಪ್ಪು ಜೊತೆಗಿನ ಒಡನಾಟವನ್ನು ಸ್ಮರಿಸಿದರು. ‘ನನ್ನ ಹಾಗೂ ಪುನೀತ್ ನಡುವೆ ಮೊದಲಿನಿಂದಲೂ ಒಳ್ಳೆಯ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ಹೈದರಾಬಾದ್ಗೆ ಬಂದಾಗ ನನ್ನನ್ನು ಭೇಟಿ ಮಾಡುತ್ತಿದ್ದರು. ‘ಅಲಾ ವೈಕುಂಟಪುರಮುಲೋ’ ಸಿನಿಮಾ ಸಂದರ್ಭದಲ್ಲಿ ನನಗೆ ಕರೆ ಮಾಡಿದ್ದರು. ಸಾಂಗ್ ಚೆನ್ನಾಗಿದೆ ಎಂದು ಹೇಳಿದ್ದರು. ಇಬ್ಬರೂ ಭೇಟಿ ಆಗೋ ಆಲೋಚನೆ ಇತ್ತು. ಆದರೆ, ಕೊವಿಡ್ ಲಾಕ್ಡೌನ್ ಕಾರಣದಿಂದ ಅದು ಸಾಧ್ಯವಾಗಲೇ ಇಲ್ಲ. ಅವರ ನಿಧನ ನೋವು ತಂದಿದೆ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಇದನ್ನೂ ಓದಿ:
‘ಅಪ್ಪು ನಮಗೆ ಬಿಟ್ಟು ಹೋದ ಆಸ್ತಿ ಇದು’; ಪುನೀತ್ ಬಗ್ಗೆ ಸಹೋದರ ರಾಘಣ್ಣ ಭಾವುಕ ಮಾತು
ಅಪ್ಪು ಸಮಾಧಿಗೆ ನಮಿಸಲು ಬೆಂಗಳೂರಿಗೆ ಬಂದ ಅಲ್ಲು ಅರ್ಜುನ್; ಪುನೀತ್ ಮನೆ ಮುಂದೆ ಫ್ಯಾನ್ಸ್ ದಂಡು