ಅಂಬಿಕಾಪತಿ ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುವ ಗುತ್ತಿಗೆದಾರ, ಮನೇಲಿ ಕೋಟಿಗಟ್ಟಲೆ ದುಡ್ಡು ಇಟ್ಟಿರ್ತಾರೆ: ಕೆಎಂ ಶಿವಲಿಂಗೇಗೌಡ

ಅಂಬಿಕಾಪತಿ ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುವ ಗುತ್ತಿಗೆದಾರ, ಮನೇಲಿ ಕೋಟಿಗಟ್ಟಲೆ ದುಡ್ಡು ಇಟ್ಟಿರ್ತಾರೆ: ಕೆಎಂ ಶಿವಲಿಂಗೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 16, 2023 | 7:30 PM

ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಬಗ್ಗೆ ಕೇಳಿದಾಗ ಅವರನ್ನೂ ಲೇವಡಿ ಮಾಡಿದ ಶಿವಲಿಂಗೇಗೌಡರು, ಅವರು ಮಾಡಿದ್ದೆಲ್ಲ ನಾಟಕ, ಅದು ಎಲ್ಲರಿಗೂ ಗೊತ್ತು, ಸಾರ್ವಜನಿಕವಾಗಿ ಡಿಕೆ ಶಿವಕುಮಾರ್ ಕಾಲು ಹಿಡಿದು ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡಿದ್ದು ತನಗೆ ಸರಿಯೆನಿಸಲಿಲ್ಲ ಎಂದರು.

ಹಾಸನ: ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರ (KM Shivalinge Gowda) ಮಾತೇ ಹಾಗೆ, ಬಿಲ್ಲಿನಿಂದ ಹೊರಟ ಬಾಣದ ಹಾಗೆ ನೇರ ಮತ್ತು ತೀಕ್ಷ್ಣ. ಹಾಸನದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಜೊತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೌಡರು ಬೆಂಗಳೂರಲ್ಲಿ ಬಿಬಿಎಂಪಿ ಗುತ್ತಿಗೆದಾರ ಆರ್ ಅಂಬಿಕಾಪತಿ (R Ambikapathy) ಮನೆಯಲ್ಲಿ ಸಿಕ್ಕ ದಾಖಲೆರಹಿತ 42 ಕೋಟಿ ರೂ. ಕಾಂಗ್ರೆಸ್ ಸರ್ಕಾರದ ಮಂತ್ರಿಗಳಿಗೆ ಸೇರಿದ್ದು ಅಂತ ಹಬ್ಬಿರುವ ಊಹಾಪೋಹಗನ್ನು ಲೇವಡಿ ಮಾಡಿದರು. ಅಂಬಿಕಾಪತಿ ಒಬ್ಬ ದೊಡ್ಡ ಗುತ್ತಿಗೆದಾರ, ಸಾವಿರಾರು ಕೋಟಿ ರೂ.ಗಳ ವ್ಯವಹಾರ ನಡೆಸುತ್ತಾರೆ, ಮನೆಯಲ್ಲಿ 30-40 ಕೋಟಿ ಯಾವಾಗಲೂ ಇಟ್ಟಿರುತ್ತಾರೆ, ಅವರ ಮನೇಲಿ ಹಣ ಸಿಕ್ರೆ ಅದು ಸರ್ಕಾರದ ಹಣ ಹೇಗಾಗುತ್ತದೆ? ಸರ್ಕಾರ ಸುಮಾರು ಜನ ಗುತ್ತಿಗೆದಾರರ ಬಿಲ್ ಗಳನ್ನು ಕ್ಲೀಯರ್ ಮಾಡಿದೆ, ಅವರ ಮನೆಯಲ್ಲೂ ಹಣ ಸಿಗಬೇಕಿತ್ತಲ್ಲ ಅಂತ ಹೇಳಿದರು. ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಬಗ್ಗೆ ಕೇಳಿದಾಗ ಅವರನ್ನೂ ಲೇವಡಿ ಮಾಡಿದ ಶಿವಲಿಂಗೇಗೌಡರು, ಅವರು ಮಾಡಿದ್ದೆಲ್ಲ ನಾಟಕ, ಅದು ಎಲ್ಲರಿಗೂ ಗೊತ್ತು, ಸಾರ್ವಜನಿಕವಾಗಿ ಡಿಕೆ ಶಿವಕುಮಾರ್ ಕಾಲು ಹಿಡಿದು ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡಿದ್ದು ತನಗೆ ಸರಿಯೆನಿಸಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ