ಲಾಲ್​ಬಾಗ್ ಫ್ಲಾವರ್ ಶೋನಲ್ಲಿ ಕೆಂಗಲ್ ಹನುಮಂತಯ್ಯರ ಪ್ರತಿಮೆ ಮುಂದೆ ಅವರ ಮೊಮ್ಮಗ ಶ್ರೀಪಾದ್​ರೊಂದಿಗೆ ಒಂದು ಮುಕ್ತ ಮಾತುಕತೆ!

ಲಾಲ್​ಬಾಗ್ ಫ್ಲಾವರ್ ಶೋನಲ್ಲಿ ಕೆಂಗಲ್ ಹನುಮಂತಯ್ಯರ ಪ್ರತಿಮೆ ಮುಂದೆ ಅವರ ಮೊಮ್ಮಗ ಶ್ರೀಪಾದ್​ರೊಂದಿಗೆ ಒಂದು ಮುಕ್ತ ಮಾತುಕತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2023 | 7:56 PM

ಥೀಮ್ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದ ಶ್ರೀಪಾದ, ಹೂಗಳಲ್ಲಿ ಸೌಧವನ್ನು ವಿನ್ಯಾಸಗೊಳಿಸಿದ ಜಗದೀಶ್ ಅವರನ್ನು ಅಭಿನಂದಿಸಿದರು.

ಬೆಂಗಳೂರು: ರಾಜ್ಯದ (ಆಗಿನ ಮೈಸೂರು) ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ (Kanagal Hanumanthaiah) ಮತ್ತು ವಿಧಾನ ಸೌಧವನ್ನು (Vidhana Soudha) ಬೇರೆ ಬೇರೆಯಾಗಿ ನೋಡುವುದು ಸಾಧ್ಯವಿಲ್ಲ, ಅವರ ಅವಧಿಯಲ್ಲೇ ಸೌಧದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು. ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ ಬಾಗ್ ನಲ್ಲಿ ಏರ್ಪಡಿಸಿರುವ ಫ್ಲಾವರ್ ಶೋನಲ್ಲಿ (Lalbagh Flower Show) ಈ ಬಾರಿಯ ಥೀಮ್ ವಿಧಾನ ಸೌಧ. ಹೂಗಳಿಂದ ನಿರ್ಮಿಸಲಾಗಿರುವ ವಿಧಾನ ಸೌಧದ ಮುಂಭಾಗದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಇದನ್ನು ವೀಕ್ಷಿಸಲು ಆ ಮಹಾನುಭಾವರ ಮೊಮ್ಮಗ ಕೆ ಶ್ರೀಪಾದ್ (K Sripad) ಕೂಡ ಆಗಮಿಸಿದ್ದರು. ಅವರೊಂದಿಗೆ ಟಿವಿ ಕನ್ನಡ ವಾಹಿನಿಯ ವರದಿಗಾರ್ತಿ ಮಾತುಕತೆ ನಡೆಸಿದ್ದಾರೆ. ಥೀಮ್ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದ ಶ್ರೀಪಾದ, ಹೂಗಳಲ್ಲಿ ಸೌಧವನ್ನು ವಿನ್ಯಾಸಗೊಳಿಸಿದ ಜಗದೀಶ್ ಅವರನ್ನು ಅಭಿನಂದಿಸಿದರು. ಬಹಳ ಮುಕ್ತವಾಗಿ ಶ್ರೀಪಾದ್ ಮಾತಾಡಿದ್ದಾರೆ, ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ