ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್

ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Sep 23, 2024 | 9:56 PM

ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಅರಕು ಏಜೆನ್ಸಿಯಲ್ಲಿ ಸುಂಟರಗಾಳಿಯು ಭಾರೀ ಹಾನಿಯನ್ನು ಉಂಟುಮಾಡಿದೆ. ಅದರ ವೇಗವನ್ನು ಕಂಡು ಸ್ಥಳೀಯ ಬುಡಕಟ್ಟು ಜನರು ಭಯಭೀತರಾಗಿದ್ದಾರೆ. ಇದೀಗ ಆ ಸುಂಟರಗಾಳಿಯ ವಿಡಿಯೋ ವೈರಲ್ ಆಗುತ್ತಿದೆ.

ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಅರಕು ಏಜೆನ್ಸಿಯಲ್ಲಿ ಸುಂಟರಗಾಳಿಯು ಹಾನಿಯನ್ನುಂಟುಮಾಡುತ್ತದೆ. ಗದ್ದೆಯಲ್ಲಿ ನೀರು ಎತ್ತಿ ಸುತ್ತುತ್ತಾ ತಿರುಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಂಬ್ರಿಗುಡ ಮಂಡಲದ ದೇಮುದುವಲಸ-ಕೊರೊಂಜಗುಡ ಕ್ಷೇತ್ರಗಳಲ್ಲಿ ಸುಂಟರಗಾಳಿ ಅಪ್ಪಳಿಸಿದೆ. ಈ ಸುಂಟರಗಾಳಿಯ ತೀವ್ರತೆ ಕಂಡು ಆದಿವಾಸಿಗಳು ತಲ್ಲಣಗೊಂಡಿದ್ದಾರೆ. ಅಮೆರಿಕದಲ್ಲಿ ಇಂತಹ ಸುಂಟರಗಾಳಿಗಳು ಜನರನ್ನು ಕೊಂದ ಪ್ರಕರಣಗಳೂ ಇವೆ. ನಮ್ಮ ದೇಶದಲ್ಲಿ ಬೃಹತ್ ಪರ್ವತಗಳು ಮತ್ತು ಎತ್ತರದ ಬೆಟ್ಟಗಳಿಂದಾಗಿ ಸುಂಟರಗಾಳಿಗಳ ಸಾಧ್ಯತೆ ಕಡಿಮೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ