‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ ದಿನದಂದು ಸ್ಪರ್ಧಿಗಳು ಯಾರು ಎಂಬುದು ಗೊತ್ತಾಗುತ್ತಿತ್ತು. ಆದರೆ ಈ ಬಾರಿ ಅದಕ್ಕೂ ಮುನ್ನವೇ ಕಂಟೆಸ್ಟೆಂಟ್ಗಳ ಹೆಸರನ್ನು ಬಹಿರಂಗ ಮಾಡಲು ‘ಕಲರ್ಸ್ ಕನ್ನಡ’ ವಾಹಿನಿ ನಿರ್ಧರಿಸಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರ ಸಮ್ಮುಖದಲ್ಲೇ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಅವರು ಮಾಹಿತಿ ನೀಡಿದ್ದಾರೆ.
‘ಈ ಬಾರಿ ಸ್ವರ್ಗ ಮತ್ತು ನರಕದ ಥೀಮ್ ಇರಲಿದೆ. ಲಾಂಚ್ಗಿಂತಲೂ ಮೊದಲೇ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಲು ಪ್ಲ್ಯಾನ್ ಮಾಡಿದ್ದೇವೆ. ಶನಿವಾರ (ಸೆ.28) ರಾಜಾ ರಾಣಿ ಶೋ ಫಿನಾಲೆಯಲ್ಲಿ ಬಿಗ್ ಬಾಸ್ನ ಕೆಲವು ಸ್ಪರ್ಧಿಗಳ ಹೆಸರು ರಿವೀಲ್ ಮಾಡುತ್ತೇವೆ. ಇದು ಈ ಬಾರಿಯ ಹೊಸತನ. ಆ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ ಅಥವಾ ನರಕಕ್ಕೆ ಹೋಗಬೇಕೋ ಎಂಬುದನ್ನು ನಿರ್ಧರಿಸಲು ವೀಕ್ಷಕರು ಓಟ್ ಮಾಡಬಹುದು’ ಎಂದು ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ತಿಳಿಸಿದ್ದಾರೆ. ಸೆ.29ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಗ್ರ್ಯಾಂಡ್ ಓಪನಿಂಗ್ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.