ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಗಲಾಟೆ ಜಾಸ್ತಿಯಾಗುತ್ತಿರುವುದನ್ನು ಕಂಡು ಬಾಗಿಲು ಮುಚ್ಚಲು ಹೇಳಿದ ಶಿವಕುಮಾರ್

|

Updated on: Jan 08, 2025 | 7:38 PM

ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ನಡೆಸಿದ್ದರ ಬಗ್ಗೆ ಶಿವಕುಮಾರ ಮಾತಾಡಿ, ಮಹಾತ್ಮಾ ಗಾಂಧಿಯವರು ಎಐಸಿಸಿಇ ನಾಯಕತ್ವ ವಹಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿದ ಸಂದರ್ಭದ ಶತಮಾನೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಅಚರಿಸಲಾಯಿತು ಮತ್ತು ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು ಎಂದರು.

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ, ಮಾತಾಡುವಾಗ ಅವರ ಎಡಬಲಗಳಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಜಿ ಪರಮೇಶ್ವರ್ ಕೂತಿದ್ದರು. ಪರಮೇಶ್ವರ್, ಮೊಯ್ಲಿ ಮತ್ತು ಕೆಹೆಚ್ ಮುನಿಯಪ್ಪ ಅವರನ್ನು ತಮ್ಮ ಅಡ್ರೆಸ್​ನಲ್ಲಿ ಶಿವಕುಮಾರ್ ಸಾಹೇಬರು ಅಂತ ಸಂಬೋಧಿಸುತ್ತಾರೆ, ಜಾರಕಿಹೊಳಿಯವರನ್ನು ತನ್ನ ಸಹೋದ್ಯೋಗಿ ಅಂತ ಹೇಳುತ್ತಾರೆ. ತಮ್ಮ ಅನುಪಸ್ಥಿತಿಯಲ್ಲಿ ಜಾರಕಿಹೊಳಿ ಡಿನ್ನರ್ ಮೀಟಿಂಗ್ ನಡೆಸಿದ್ದು ಪ್ರಾಯಶಃ ಅವರಿಗೆ ಇಷ್ಟವಾಗಿಲ್ಲ. ಅವರು ಸುದ್ದಿಗೋಷ್ಠಿ ಆರಂಭಿಸುವಾಗ ಬಲಭಾಗ ಪವೇಶದ ಕಡೆ ಬಹಳ ಸದ್ದು ಗಲಾಟೆ ಕೇಳಿಬರುತ್ತಿರುವದನ್ನು ಗಮನಿಸಿ ಬಾಗಿಲು ಮುಚ್ಚಿಬಿಡುವಂತೆ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಗರದಲ್ಲಿ ಹೊಸ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಶಿವಕುಮಾರ್ ಮೇಲೆ ಜೋಕ್ ಕಟ್ ಮಾಡಿದ ಸಿದ್ದರಾಮಯ್ಯ