ಬಾಲರಾಮನ ವಿಗ್ರಹವನ್ನು ತಮ್ಮ ಕಲ್ಪನೆಯಲ್ಲಿ ಕೆತ್ತಿದ್ದ ಮತ್ತೊಬ್ಬ ಕನ್ನಡಿಗ ಗಣೇಶ್ ಭಟ್ ರೊಂದಿಗೆ ಮಾತುಕತೆ

|

Updated on: Jan 24, 2024 | 11:04 AM

2,000 ವರ್ಷಗಳ ಶಿಲ್ಪ ರಚನೆ ಮತ್ತು ಶಿಲ್ಪ ಶಾಸ್ತ್ರ ಅಧ್ಯಯನಗಳನ್ನು ಆಧರಿಸಿ ಏಕಶಿಲೆಯನ್ನು ಬಾಲರಾಮನ ಮೂರ್ತಿಯನ್ನು 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದಾಗಿ ಅವರು ಹೇಳುತ್ತಾರೆ. ಅವರ ಶ್ರಮ ಮತ್ತು ರಾಮಜನ್ಮಭೂಮಿ ಟ್ರಸ್ಟ್ ವತಿಯಿಂದ ಸಹಾಕಾರ ನೆರವಿನ ಬಗ್ಗೆ ಅವರ ಮಾತುಗಳಲ್ಲೇ ಕೇಳಿ.

ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ (Ram Temple Consecration) ನೆರವೇರಿದೆ ಮತ್ತು ಅಯೋಧ್ಯೆಯ ಭವ್ಯ ರಾಮಮಂದಿರ ದ್ವಾರಗಳು ಭಕ್ತರಿಗಾಗಿ ಎರಡು ದಿನಗಳಿಂದ ತೆರೆಯಲ್ಪಿಟ್ಟಿವೆ. ನಿನ್ನೆ ಅಂದರೆ ಮಂಗಳವಾರ ಸುಮಾರು 7 ಲಕ್ಷ ಜನ ಅಯೋಧ್ಯೆಗೆ ಬಂದು ರಾಮನ ದರ್ಶನಪಡೆದುಕೊಂಡಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ, ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ವಿಗ್ರಹವನ್ನು (Ram Lalla idol) ಕೆತ್ತಿದ್ದು ಮೈಸೂರಿನ ಅರುಣ್ ಯೋಗಿರಾಜ್. ಆದರೆ, ಅವರೊಂದಿಗೆ ಬೇರೆ ಶಿಲ್ಪಿಗಳಿಗೂ ಮೂರ್ತಿಯನ್ನು ತಮ್ಮ ಕಲ್ಪನೆಯಲ್ಲಿ ಕೆತ್ತುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅವರಲ್ಲೊಬ್ಬರು ಕರ್ನಾಟಕದವರೇ ಆಗಿರುವ ಗಣೇಶ್ ಎಲ್ ಭಟ್ (Ganesh L Bhat). ಅವರೊಂದಿಗೆ ಟಿವಿ9 ಕನ್ನಡ ವಾಹಿನಿಯ ವರದಿಗಾರ ಮಾತಾಡಿದ್ದು, ಭಟ್ ತಮ್ಮ ಕಲ್ಪನೆಯಲ್ಲಿ ಕೆತ್ತಿದ ಬಾಲರಾಮನ ಬಗ್ಗೆ ಹೇಳಿದ್ದಾರೆ. ಭಟ್ ಅವರು, ರಾಮನ ಬಗ್ಗೆ ಅಧ್ಯಯನಗಳನ್ನು ಮಾಡಿ, ಪೂಜೆ ಸಲ್ಲಿಸಿದ ಬಳಿಕ ಕಂಕಣಧಾರಿಯಾಗಿ ಕಳೆದ ವರ್ಷ ಮೇ ತಿಂಗಳಲ್ಲಿ 7-8 ಸಹಾಯಕರೊಂದಿಗೆ ಮೂರ್ತಿ ಕೆತ್ತನೆ ಕೆಲಸ ಆರಂಭಿಸಿದ್ದಾಗಿ ಹೇಳುತ್ತಾರೆ. 2,000 ವರ್ಷಗಳ ಶಿಲ್ಪ ರಚನೆ ಮತ್ತು ಶಿಲ್ಪ ಶಾಸ್ತ್ರ ಅಧ್ಯಯನಗಳನ್ನು ಆಧರಿಸಿ ಏಕಶಿಲೆಯನ್ನು ಬಾಲರಾಮನ ಮೂರ್ತಿಯನ್ನು 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದಾಗಿ ಅವರು ಹೇಳುತ್ತಾರೆ. ಅವರ ಶ್ರಮ ಮತ್ತು ರಾಮಜನ್ಮಭೂಮಿ ಟ್ರಸ್ಟ್ ವತಿಯಿಂದ ಸಹಾಕಾರ ನೆರವಿನ ಬಗ್ಗೆ ಅವರ ಮಾತುಗಳಲ್ಲೇ ಕೇಳಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ