ಕೊಲೆ ಬೆದರಿಕೆ ಎದುರಿಸುತ್ತಿರುವ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿಯಿಂದ ಮಂಗಳೂರು ಪೊಲೀಸರು ಮಾಹಿತಿ ಪಡೆದರು
ಹೆಚ್ಚಿನ ಯಾವುದೇ ವಿಚಾರವನ್ನು ಗುಣರಂಜನ್ ವರದಿಗಾರರೊಂದಿಗೆ ಹಂಚಿಕೊಳ್ಳಲಿಲ್ಲ. ತಮ್ಮಲಿರುವ ಮಾಹಿತಿ ಪಡೆದುಕೊಂಡರು ಅಂತ ಹೇಳಿದ ಅವರು ಪೊಲೀಸರು ನಡೆಸುವ ತನಿಖೆಯ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
Mangaluru: ಪ್ರಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರ ಸಹೋದರ ಗುಣರಂಜನ ಶೆಟ್ಟಿ (Gunaranjan Shetty) ಅವವರಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಹಿಂದೆ ಡಾನ್ ಆಗಿದ್ದು ನಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ದಿವಂಗತ ಮುತ್ತಪ್ಪ ರೈ (Muthappa Rai) ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಗುಣರಂಜನ, ಬೆದರಿಕೆ ಕರೆಗಳ ವಿಷಯವಾಗಿ ಮಂಗಳೂರು ಪೋಲೀಸರಿಗೆ ದೂರು ಸಲ್ಲಿಸಿದ್ದರು. ಹಾಗಾಗಿ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಮಂಗಳೂರಿನ ಪೊಲೀಸ್ ಕಚೇರಿಗೆ ಕರೆಸಲಾಗಿತ್ತು. ಪೊಲೀಸರೊಂದಿಗೆ ಮಾತುಕತೆ ನಡೆಸಿ ಹೊರಬಂದ ಬಳಿಕ ಮಂಗಳೂರು ಟಿವಿ9 ಕನ್ನಡ ವಾಹಿನಿ ವರದಿಗಾರ ಪೃಥ್ವಿರಾಜ ಬೊಮ್ಮನಕೆರೆ ಅವರೊಂದಿಗೆ ಮಾತಾಡಿದರು.
ಹೆಚ್ಚಿನ ಯಾವುದೇ ವಿಚಾರವನ್ನು ಗುಣರಂಜನ್ ವರದಿಗಾರರೊಂದಿಗೆ ಹಂಚಿಕೊಳ್ಳಲಿಲ್ಲ. ತಮ್ಮಲಿರುವ ಮಾಹಿತಿ ಪಡೆದುಕೊಂಡರು ಅಂತ ಹೇಳಿದ ಅವರು ಪೊಲೀಸರು ನಡೆಸುವ ತನಿಖೆಯ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.