ಡಾಲಿ ಧನಂಜಯ ಮದುವೆ ಆರತಕ್ಷತೆಯಲ್ಲೇ ಶಾಸಕ ಶಿವಲಿಂಗೇಗೌಡರಿಗೆ ಸನ್ಮಾನ ಮಾಡಿದ ನಟನ ಕುಟುಂಬ
ಡಾಲಿ ಧನಂಜಯ ಅರಸೀಕೆರೆ ಕ್ಷೇತ್ರದವರೇ ಆಗರಿರುವುದರಿಂದ ಅಲ್ಲಿನ ಶಾಸಕ ಶಿವಲಿಂಗೇಗೌಡರ ಜೊತೆ ಅವರ ಕುಟುಂಬಕ್ಕೆ ಉತ್ತಮ ಒಡನಾಟ ಇರಬಹುದು. ಹಾಗಾಗೇ ಜನಪ್ರತಿನಿಧಿಯನ್ನು ಅವರು ರಿಷಪ್ಷನ್ ನಡೆಯುತ್ತಿರುವ ಜಾಗದಲ್ಲಿ ಸನ್ಮಾನ ಮಾಡುತ್ತಿದ್ದಾರೆ. ಶಾಸಕರೊಂದಿಗೆ ಬೇರೆ ಜನರನ್ನೂ ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಲಾಗುತ್ತಿದೆ. ಮದುವೆಯ ಸಡಗರ ಮತ್ತು ಗಡಿಬಿಡಿಯಲ್ಲಿ ಧನಂಜಯ ಫ್ಯಾಮಿಲಿ ಇದನ್ನೆಲ್ಲ ನೆನಪಿಟ್ಟಿರೋದು ಶ್ಲಾಘನೀಯ.
ಮೈಸೂರು: ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಹಾಕಲಾಗಿರುವ ಅದ್ದೂರಿ ಮತ್ತು ನಯನಮನೋಹರ ಸೆಟ್ ನಲ್ಲಿ ಒಂದೆಡೆ ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ಮದುವೆಯ ಅರತಕ್ಷತೆ ಭರ್ಜರಿಯಾಗಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಸ್ಥಳೀಯ ಶಾಸಕ ಕೆಎಂ ಶಿವಲಿಂಗೇಗೌಡರ ಸನ್ಮಾನವೂ ಜೋರಾಗಿ ನಡೆಯಿತು. ಮದುವೆಗೆ ಬಂದಿರುವ ಅಭಿಮಾನಿಗಳಲ್ಲಿ ನಟನೊಂದಿಗೆ ಸೆಲ್ಫೀ ತೆಗೆದುಕೊಳ್ಳುವ ಉಮ್ಮೇದಿ. ವೇದಿಕೆ ಮೇಲಿರುವ ವಲಂಟೀರ್ಗಳು ಅದಕ್ಕೆ ಅವಕಾಶ ನೀಡದಿದ್ದರೂ ಜನ ಪ್ರಯತ್ನಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಮದುವೆಗೇನೇ ಬಂದಿದ್ದೇವೆ ಸೆಲ್ಫೀ ಇಲ್ಲಾಂದ್ರೆ ಹೆಂಗೆ ಸ್ವಾಮಿ ಅನ್ನೋದು ಅವರ ಧೋರಣೆ ಆಗಿರಬಹುದು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಾಲಿ ಧನಂಜಯ್ ಮದುವೆ ಸೆಟ್ ಎಷ್ಟು ಬೃಹತ್ ಎಂಬುದು ಗೊತ್ತೆ?
Latest Videos

ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್

ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್ನಿಂದ ಹೊರ ಬಂದ ಸುನಿತಾ

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
