AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರೆಯಾಗುತ್ತಿದ್ದರೂ ಗ್ಯಾರಂಟಿ ಕೊಡುತ್ತಿದ್ದೇವೆ, ಕೊಡುತ್ತೇವೆ: ಡಿಕೆಶಿ, ಸಿದ್ದರಾಮಯ್ಯ ಮಾತಿನ ಮರ್ಮ ಏನು?

ಹೊರೆಯಾಗುತ್ತಿದ್ದರೂ ಗ್ಯಾರಂಟಿ ಕೊಡುತ್ತಿದ್ದೇವೆ, ಕೊಡುತ್ತೇವೆ: ಡಿಕೆಶಿ, ಸಿದ್ದರಾಮಯ್ಯ ಮಾತಿನ ಮರ್ಮ ಏನು?

ಪ್ರಸನ್ನ ಗಾಂವ್ಕರ್​
| Edited By: |

Updated on: Feb 26, 2026 | 8:23 AM

Share

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೊನೆಗೂ ಒಪ್ಪಿಕೊಂಡಿದ್ದು, ಆದರೂ ಅವುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಏತನ್ಮಧ್ಯೆ, ಬಾಕಿ ಹಣ ಪಾವತಿಗೆ ಗುತ್ತಿಗೆದಾರರು, ವೇತನಕ್ಕಾಗಿ ಸರ್ಕಾರಿ ವೈದ್ಯರು ಮತ್ತು ಖಾಲಿ ಹುದ್ದೆ ಭರ್ತಿಗೆ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಗೆ ಸಜ್ಜಾಗಿದ್ದು, ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಬೆಂಗಳೂರು, ಫೆಬ್ರವರಿ 26: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡರೇ? ಇಬ್ಬರೂ ಆಡಿರುವ ಮಾತುಗಳು ಇದಕ್ಕೆ ಪುಷ್ಟಿ ನೀಡಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೂ, ಅವು ಜನರಿಗೆ ಆರ್ಥಿಕ ಬಲವನ್ನು ನೀಡಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಗ್ಯಾರಂಟಿಗಳಿಗಾಗಿ ಕೊಡಲಾಗುತ್ತಿದೆ, ಅದು ಬರ್ಡನ್ ಎಂದು ಅವರು ಹೇಳಿರಬಹುದು ಅಷ್ಟೆ. ಹಾಗಂತ ನಾವು ಗ್ಯಾರಂಟಿಗಳಿಗೆ ಅನುದಾನ ನಿಲ್ಲಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ 1.20 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ಮೀಸಲಿಡಲಾಗಿದೆ ಮತ್ತು ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us